‘ಏಸ್’ಐಎಎಸ್ ಅಕಾಡೆಮಿಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ತರಬೇತಿ

0
274

ಸನ್ಮಾರ್ಗ ವಾರ್ತೆ

ನಗರದ ‘ಏಸ್‌’ ಐಎಎಸ್‌ ಅಕಾಡೆಮಿಯಲ್ಲಿ ಕಣಚೂರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಪ್ರಾಯೋಜಿತ ಪ್ರವೇಶ ಪರೀಕ್ಷೆ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಬ್ಯಾಚ್ 2026 ಇದರ ಉದ್ಘಾಟನಾ ಕಾರ್ಯಕ್ರಮವು 21/6/2026 ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಣಚೂರು ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹಾಜಿ ಯು.ಕೆ. ಮೋನು ಅವರು 2026ನೇ ಸಾಲಿನ ಪೊಲೀಸ್ ಕಾನ್‌ಸ್ಟೇಬಲ್ ತರಬೇತಿ ಬ್ಯಾಚ್‌ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಸರ್ಕಾರಿ ಉದ್ಯೋಗದ ಮೂಲಕ ದೇಶ ಸೇವೆಗೆ ಮುಂದಾಗುವಂತೆ ಕರೆ ನೀಡಿದರು, ಹಾಗೂ ತಮ್ಮ ಸಂಪೂರ್ಣ ಸಹಕಾರವಿರಲಿದೆ ಎಂದು ತಿಳಿಸಿದರು.

ಜಮೀಯತುಲ್ ಫಲಾಹ್ ಮಂಗಳೂರು ನಗರ ಅಧ್ಯಕ್ಷರಾದ ಶ್ರೀ ಸೈಯದ್ ಅಶ್ಫಾಕ್ ಅಹ್ಮದ್ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀ ಮುಶಾಹಿದ್ ಅಹ್ಮದ್ ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ಏಸ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಇಮ್ತಿಯಾಝ್ ಖತೀಬ್, ಏಸ್ ಫೌಂಡೇಶನ್‌ನ ಟ್ರಸ್ಟಿಗಳಾದ ಶ್ರೀ ಬಿ.ಎಸ್. ಬಶೀರ್ ಮತ್ತು ಶ್ರೀ ಅಲ್ತಾಫ್ ಖತೀಬ್, ಕಣಚೂರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜಕರಾದ ಶ್ರೀ ಹನೀಫ್ ಪುತ್ತೂರು ಹಾಗೂ ಏಸ್ ಐಎಎಸ್ ಅಕಾಡೆಮಿಯ ನಿರ್ದೇಶಕರಾದ ಶ್ರೀ ನಝೀರ್ ಅಹ್ಮದ್ ಅವರು ಉಪಸ್ಥಿತರಿದ್ದರು.

ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಶ್ರೀ ಮುಶಾಹಿದ್ ಅಹ್ಮದ್ ಅವರು ಪ್ರೇರಣೆಯ ಮಾತುಗಳ ಮೂಲಕ ಪ್ರೋತ್ಸಾಹಿಸಿದರು. ಪೊಲೀಸ್ ಕಾನ್‌ಸ್ಟೇಬಲ್ ಶ್ರೀ ಮನ್ಸೂರ್ ಅವರು ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ ಆಕಾಂಕ್ಷಿಗಳೊಂದಿಗೆ ಪ್ರಶೋತ್ತರ ಅವಧಿಯನ್ನು ನಡೆಸಿದರು.

ಏಸ್ ಐಎಎಸ್ ಅಕಾಡೆಮಿಯ ಸಹ-ನಿರ್ದೇಶಕರಾದ ಶ್ರೀ ಅಮ್ಮಾರ್ ಅಹ್ಸನ್ ಸಯೀದ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯ ಸಿದ್ಧತೆ ನಡೆಸಲು ಬಯಸುವ ಆಕಾಂಕ್ಷಿಗಳು ದೂರವಾಣಿ ಸಂಖ್ಯೆ 7090109997ಗೆ ಸಂಪರ್ಕಿಸುವ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದೆಂದು ಸಂಸ್ಥೆ ತಿಳಿಸಿದೆ.