ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.16: ಬಿಹಾರ ಮತ್ತು ಹನ್ನೊಂದು ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ನ ಪ್ರದರ್ಶನ ನಿರಾಶಜನಕವಾಗಿದ್ದು ಕಾಂಗ್ರೆಸ್ ನಾಯಕತ್ವದ ವಿರುದ್ಧ ಹಿರಿಯ ನಾಯಕ ಕಪಿಲ್ ಸಿಬಲ್ ಬಹಿರಂಗ ಅಭಿಪ್ರಾಯ ಪ್ರಕಟಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಪಾರ್ಟಿಯ ಪ್ರಾಮುಖ್ಯತೆ ನಷ್ಟವಾಗಿದೆ. ಕಾಂಗ್ರೆಸ್ಅನ್ನು ಬಿಜೆಪಿಗೆ ಪರ್ಯಾಯವಾದ ಪಕ್ಷವೆಂದು ಜನರು ಪರಿಗಣಿಸುವುದಿಲ್ಲ. ವಿಷಯ ನಾಯಕರಿಗೆ ಗೊತ್ತಿದ್ದರೂ ತಿದ್ದಿಕೊಳ್ಳಲು ತಯಾರಿಲ್ಲ ಎಂದು ಕಪಿಲ್ ಸಿಬಲ್ ಬಹಿರಂಗವಾಗಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಪಾರ್ಟಿಯಲ್ಲಿ ವೇದಿಕೆಯಿಲ್ಲದಿದ್ದುರಿಂದ ಹೀಗೆ ಹೇಳಬೇಕಾಯಿತು ಎಂದು ಸಿಬಲ್ ಹೇಳಿದರು.
ನಾವು ಕೆಲವರು ಮುಂದೆ ಕಾಂಗ್ರೆಸ್ ಏನೆಲ್ಲ ಮಾಡಬೇಕೆಂದು ಪತ್ರ ಬರೆದಿದ್ದೆವು. ಆದರೆ ನಮ್ಮ ಮಾತಿಗೆ ಕಿವಿಕೊಟ್ಟಿಲ್ಲ. ಫಲಿತಾಂಶ ಎಲ್ಲರಿಗೂ ಕಾಣಿಸುತ್ತಿದೆ. ಬಿಹಾರದಲ್ಲಿ ಮಾತ್ರವಲ್ಲ ಎಲ್ಲೆಲ್ಲ ಉಪಚುನಾವಣೆ ನಡೆದಿದೆ. ಅಲ್ಲೆಲ್ಲ ಜನರು ಕಾಂಗ್ರೆಸ್ ಅನ್ನು ಬಿಜೆಪಿಗೆ ಬದಲಿ ಶಕ್ತಿಯಾಗಿ ನೋಡಿಲ್ಲ ಎಂದು ಸಿಬಲ್ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಕಾಂಗ್ರೆಸ್ ಕಾರ್ಯಕಾರಿಣಿಯ ಒಬ್ಬ ಸದಸ್ಯ ಪಾರ್ಟಿ ಆತ್ಮಪರಿಶೋಧನೆ ನಡೆಸೀತೆಂದು ಹೇಳಿದ್ದರು. ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ನಲ್ಲಿ ಆತ್ಮಾವಲೋಕನ ನಡೆದಿಲ್ಲ. ಹೀಗಿರುವಾಗ ಈಗ ಆತ್ಮಾವಲೋಕ ನಡೆಯುವ ನಿರೀಕ್ಷೆಯೇನು ಉಳಿದಿದೆ. ಕಾಂಗ್ರೆಸ್ನ ಸಮಸ್ಯೆ ಏನು ಎಂದು ಎಲ್ಲರಿಗೂ ಗೊತ್ತಿದೆ. ಪಾರ್ಟಿ ನಾಯಕತ್ವಕ್ಕೆ ಎಲ್ಲ ಉತ್ತರವೂ ಗೊತ್ತಿದೆ. ಆದರೆ ಅದನ್ನು ಪರಿಹರಿಸಲು ಅವರು ತಯಾರಾಗಿಲ್ಲ. ಹೀಗಿರುವಾಗ ಗ್ರಾಫ್ ಹೀಗೆ ಕುಸಿಯುವ ಸ್ಥಿತಿಯಲ್ಲಿಯೇ ಇರಲಿದೆ ಎಂದು ಸಿಬಲ್ ಹೇಳಿದರು.
ನೇತೃತ್ವದ ಸುತ್ತಲಿರುವ ನಾಮನಿರ್ದೇಶಿತ ಪ್ರತಿನಿಧಿಗಳ ಸ್ಪಷ್ಟೀಕರಣವನ್ನು ಮಾತ್ರ ನಾವು ಕೇಳುತ್ತಿದ್ದೇವೆ. ಬಿಹಾರದ ಮತ್ತು ಉಪಚುನಾವಣೆಯ ಪ್ರದರ್ಶನದ ಕುರಿತು ಪಾರ್ಟಿಯ ನಿಲುವು ತಿಳಿಯಬೇಕಾಗಿದೆ ಎಂದು ಕಪಿಲ್ ಸಿಬಲ್ ಹೇಳಿದರು.
ಕಾಂಗ್ರೆಸ್ನಲ್ಲಿ ಸಮೂಲ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದ 23 ಹಿರಿಯ ನಾಯಕರಲ್ಲಿ ಕಪಿಲ್ ಸಿಬಲ್ ಒಬ್ಬರು.












