ಸನ್ಮಾರ್ಗ ವಾರ್ತೆ
ವಿಟ್ಲ: ಕನ್ಯಾನ ಗ್ರಾಮ ಪಂಚಾಯತ್ ನಲ್ಲಿನ ಕನ್ಯಾನ ಕೆಳಗಿನಪೇಟೆ ಪರಿಸರವನ್ನು, ಜಮಾಅತೆ ಇಸ್ಲಾಮಿ ಹಿಂದ್, ವಿಟ್ಲದ ಕಾರ್ಯಕರ್ತರು, ಗ್ರಾಮ ಪಂಚಾಯತ್ ಕನ್ಯಾನ ಇದರ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯವನ್ನು ನೇರವೇರಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾದ್ಯಂತ ಹಮ್ಮಿಕೊಂಡಿರುಬ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಅಭಿಯಾನದ ಅಂಗವಾಗಿ ನಡೆಸಲಾದ ಸ್ವಚ್ಛತಾ ಅಭಿಯಾನದಲ್ಲಿ ಆಳ್ವ ಮಿತ್ತಳಿಕೆ (P. D. O.) ರವರು ಉದ್ಘಾಟಿಸಿ, ‘ಸ್ವಚ್ಛ ವಾತಾವರಣ ನೆಮ್ಮದಿಯ ತಾಣ’ ಎಂಬ ಘೋಷಣೆಯೊಂದಿಗೆ, ಜಮಾತೆ ಇಸ್ಲಾಮಿ ಹಿಂದ್ ರಾಜ್ಯದ್ಯಂತ ಆಚರಿಸುವ ಈ, ಕಾರ್ಯಕ್ರಮವು ಬಹಳ ಜನಹಿತ ಕ್ರಿಯಾತ್ಮಕ ಚಟುವಟಿಕೆಯಾಗಿದ್ದು ಇಷ್ಟೊಂದು, ಜನೋಪಯೋಗಿ ಕಾರ್ಯಗಳಲ್ಲಿ ಎಲ್ಲರೂ ಸಹಕರಿಸುವ ಅಗತ್ಯವಿದೆ,ಯಾಕೆಂದರೆ ಜನರು ಒಂದಾಗಿ ಇವುಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಇತ್ಯಾದಿ ಕೆಲಸಗಳು ಯಶಸ್ವಿಯಾಗುವುದು ಎಂದವರು ಹೇಳಿದರಲ್ಲದೆ, ಈ ಕಾರ್ಯಕ್ರಮವನ್ನು ಆಯೋಜಿಸಿದ ವಿಟ್ಲ ಜಮಾಅತೆ ಇಸ್ಲಾಮಿ ಹಿಂದ್ನ್ನು ಶ್ಲಾಘಿಸಿದರು.
ನಂತರ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ವಿಟ್ಲ ಇದರ ಸ್ಥಾನೀಯ ಅಧ್ಯಕ್ಷರಾದ ಹೈದರ್ ಅಲಿ ನೀರ್ಕಜೆಯವರು, ಸ್ವಚ್ಛತೆಯನ್ನು ಇಸ್ಲಾಂ ತನ್ನ ವಿಶ್ವಾಸದ ಭಾಗವೆಂದು ಬಣ್ಣಿಸಿದೆ. ಪ್ರವಾದಿವರ್ಯರು ಕಲಿಸಿದ ಈ ಆದರ್ಶವನ್ನು ಪ್ರತಿಪಾದಿಸುವ ಮತ್ತು ಪ್ರಾಯೋಗಿಕವಾಗಿಸುವುದನ್ನು ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಅಭಿಯಾನದ ಪ್ರಯುಕ್ತ ಕರ್ಣಾಟಕ ರಾಜ್ಯಾದ್ಯಂತ ಎಲ್ಲೆಡೆಯಲ್ಲಿಯೂ ನಮ್ಮ ಸಂಘಟನೆ ಕೈಗೊಂಡಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಭಾಗಿಯಾಗಿ ಸಹಕರಿಸಿದ ಗ್ರಾಮಾಭಿವೃದ್ಧಿ ಅಧಿಕಾರಿಯವರನ್ನು ಪ್ರವಾದಿಯವರನ್ನು ಪರಿಚಯಿಸುವ ಕಿರುಹೊತ್ತಿಗೆಯನ್ನು ಉಡುಗೊರೆ ನೀಡಿ ಗೌರವಿಸಲಾಯಿತು.














