ಪ್ರಫುಲ್ ಪಟೇಲ್ ಓರ್ವ ಗೂಂಡಾ: ಕಾಂಗ್ರೆಸ್ ಸಂಸದ ಕೆ. ಮುರಳೀಧರನ್

0
539

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಲಕ್ಷದ್ವೀಪದ ಆಡಳಿತಗಾರ ಪ್ರಫುಲ್ ಕೆ. ಪಟೇಲ್‍ರನ್ನು ಕಾಂಗ್ರೆಸ್ ಸಂಸದ ಕೆ. ಮುರಳೀಧರನ್ ಕಟುವಾಗಿ ಟೀಕಿಸಿದ್ದಾರೆ. ಪ್ರಫುಲ್ ಪಟೇಲ್‍ ಒಬ್ಬ ಗೂಂಡಾ ಆಡ್ಮಿನಿಸ್ಟ್ರೇಟರ್ ಎಂದು ಮುರಳೀಧರನ್ ಹೇಳಿದ್ದಾರೆ.

ಉಸಿರುಗಟ್ಟಿಸಿ ಕೊಲ್ಲುವ ವರ್ತನೆ ಇವರಿಂದಾಗುತ್ತಿದೆ. ದ್ವೀಪದ ವಿಷಯಗಳು ಕೈಮೀರಿ ಹೋಗುತ್ತಿದೆ ಎಂದು ಮುರಳೀಧರನ್ ತಿಳಿಸಿದ್ದಾರೆ. ಲಕ್ಷದ್ವೀಪದಲ್ಲಿ ಪ್ರಫುಲ್ ಪಟೇಲ್ ಜನ ವಿರೋಧಿ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಬೃಹತ್ ಪ್ರತಿಭಟನೆ ಕೇರಳದಲ್ಲಿ ವ್ಯಕ್ತವಾಗಿದೆ. ಆಡ್ಮಿನಿಸ್ಟ್ರೇಟರ್ ವಿರುದ್ಧ ರಾಜಕೀಯ ನಾಯಕರು ನೇರ ಪ್ರತಿಭಟನಾ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ.