ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ಕಾಂಗ್ರೆಸ್ ನಾಯಕರ ಪಾತ್ರವಿಲ್ಲ ಎಂದ ಪ್ರಜ್ವಲ್ ರೇವಣ್ಣ ಡ್ರೈವರ್ ಕಾರ್ತಿಕ್

0
195

ಸನ್ಮಾರ್ಗ ವಾರ್ತೆ

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಮಾತ್ರ ಕೊಟ್ಟಿದ್ದೆ. ವಿಡಿಯೋಗಳು ಲೀಕಾಗಿರುವುದರ ಹಿಂದೆ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ ಎಂದು ಪ್ರಜ್ವಲ್ ರೇವಣ್ಣ ಅವರ ಡ್ರೈವರ್ ಆಗಿದ್ದ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕಳೆದ 15 ವರ್ಷಗಳಿಂದ ರೇವಣ್ಣರ ಕುಟುಂಬದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತಿದ್ದೆ. ನನ್ನ ಜಮೀನನ್ನೆಲ್ಲ ಪ್ರಜ್ವಲ್ ಕುಟುಂಬದ ಹೆಸರಿಗೆ ಬರೆಸಿಕೊಂಡು ನನಗೆ ಮತ್ತು ನನ್ನ ಹೆಂಡತಿಗೆ ಹಲ್ಲೆ ಮಾಡಿದ್ದರು. ಮಾನಸಿಕವಾಗಿ ಹಿಂಸೆ ನೀಡಿದರು. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೆ ಎಂದವರು ತಿಳಿಸಿದ್ದಾರೆ.

ಅವರ ಮನೆಯಿಂದ ಹೊರಗೆ ಬಂದ ಮೇಲೆ ರೇವಣ್ಣ ಫ್ಯಾಮಿಲಿ ವಿರುದ್ಧ ಕೇಸ್ ಹಾಕಲು ಪ್ರಯತ್ನಿಸುತ್ತಿದೆ. ಇದೇ ಸಂದರ್ಭದಲ್ಲಿ ರೇವಣ್ಣ ಫ್ಯಾಮಿಲಿ ವಿರುದ್ಧ ಹೋರಾಡುತ್ತಿದ್ದ ಮತ್ತು ಬಿಜೆಪಿಯ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಅವರನ್ನು ಭೇಟಿ ಮಾಡಿದೆ. ಬೇರೆ ಯಾರಿಂದಲೂ ನನಗೆ ನ್ಯಾಯ ಸಿಗುವುದಿಲ್ಲ, ದೇವರಾಜೇಗೌಡ ಅವರೇ ಸೂಕ್ತ ಎಂದು ಭಾವಿಸಿ ಅವರ ಬಳಿ ನನ್ನ ಕಷ್ಟವನ್ನೆಲ್ಲ ಹೇಳಿಕೊಂಡೆ ಎಂದವರು ವಿವರಿಸಿದ್ದಾರೆ.

ಪೆನ್ ಡ್ರೈವ್ ನ ಅಶ್ಲೀಲ ವಿಡಿಯೋಗಳನ್ನು ನಾನು ಬಿಡುಗಡೆ ಮಾಡಿಲ್ಲ, ಅವರು ನನ್ನಿಂದ ಅವನ್ನೆಲ್ಲ ಪಡೆಕೊಂಡಿದ್ದರು. ಅದನ್ನು ದೇವರಾಜ ಗೌಡ ಅವರೇ ಬಿಡುಗಡೆ ಮಾಡಿದ್ದಾರೆ‌ ಮತ್ತು ನನ್ನ ಮೇಲೆ ಸುಳ್ಳು ಆರೋಪವನ್ನು ಹೊರಿಸಿದ್ದಾರೆ. ನಾನು ಸಿಟ್ ಮುಂದೆ ಎಲ್ಲವನ್ನು ಹೇಳಿಕೊಳ್ಳುತ್ತೇನೆ, ನನ್ನಲ್ಲಿರುವ ಎಲ್ಲಾ ದಾಖಲೆಗಳನ್ನು ಸಿಟ್ ನ ಮುಂದೆ ಸಲ್ಲಿಸುವೆ ಎಂದವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here