ನಾಲ್ಕು ದಿನಗಳಲ್ಲಿ ಮೂರು ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ

0
528

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನಾಲ್ಕು ತಿಂಗಳುಗಳ ಬಳಿಕ, ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವು ಶುಕ್ರವಾರ 80 ಪೈಸೆಯಷ್ಟು ಏರಿಕೆಯಾಗಿದ್ದು, ನಾಲ್ಕು ದಿನಗಳಲ್ಲಿ ತೈಲ ದರವು ಪ್ರತಿ ಲೀಟರ್‌ಗೆ ಒಟ್ಟು ರೂ.೨.೪೦ರಷ್ಟು ಏರಿಕೆ ಕಂಡು ಬಂದಿದೆ.

ದಿಲ್ಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.97.81 ಮತ್ತು ಡೀಸೆಲ್ ದರ ರೂ.89.07 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀಟರ್‌ಗೆ 85 ಮತ್ತು 79 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ದರ ಲೀಟರಿಗೆ ರೂ.103.11 ಮತ್ತು ಡೀಸೆಲ್ ದರ ಲೀಟರಿಗೆ ರೂ.87.37 ಆಗಿದೆ.

ಮಾ.23ರಂದು ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರ 50 ರೂ. ಏರಿಕೆಯಾಗಿತ್ತು. ದಿಲ್ಲಿಯಲ್ಲಿ ಗುರುವಾರ ಸಿಎನ್‌ಜಿ ದರ ಪ್ರತಿ ಕೆಜಿಗೆ ಒಂದು ರೂ. ಹೆಚ್ಚಿಸಲಾಗಿದೆ. ಪ್ರತಿ ಕೆಜಿ ಸಿಎನ್‌ಜಿ ದರ 59.01 ರೂ. ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿರುವ ಅಡುಗೆ ಅನಿಲ (ಪಿಎನ್‌ಜಿ) ಪ್ರತಿ ಕ್ಯೂಬಿಕ್ ಮೀಟರ್‌ಗೆ 36.61 ರೂಪಾಯಿ ಆಗಿದೆ.