ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.17: ಹೊಸ ಮೋಟಾರು ವಾಹನ ಕಾನೂನಿನ ವಿರುದ್ಧ ದಿಲ್ಲಿಯಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತಿದ್ದು ಮೋದಿ ವಿರುದ್ಧ ಘೋಷಣೆ ಕೂಗಿದರು. ಸೋಮವಾರ ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್ ನೇತೃತ್ವದಲ್ಲಿ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆದಿದ್ದು ನೂರಾರು ಕಾರ್ಮಿಕರು ಭಾಗವಹಿಸಿದರು.
ಸಂಘಟನೆ ಗುರುವಾರ ದಿಲ್ಲಿಯಲ್ಲಿ ಮೋಟಾರು ವಾಹನ ಮುಷ್ಕರ ಘೋಷಿಸಿದೆ. ಆಟೋ, ಆನ್‍ಲೈನ್ ಟ್ಯಾಕ್ಸಿ, ಸರಕಾರಿ ವಾಹನಗಳ ಸಹಿತ ಎಲ್ಲ ವಾಹನಗಳನ್ನು ತಡೆಯಲಾಗುವುದು. ಮಾರುಕಟ್ಟೆ ಕಾರ್ಯವೆಸಗದಂತೆ ತಡೆಯಲಾಗುವುದು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಭಾರೀ ಮೊತ್ತದ ದಂಡ ಸರಕಾರದ ಕ್ರೂರ ತೀರ್ಮಾನವಾಗಿದೆ. ಟ್ಯಾಕ್ಸ್ ಸಹಿತ ಎಲ್ಲವನ್ನೂ ಹೆಚ್ಚಳ ಗೊಳಿಸಲಾಯಿತು. ನಮ್ಮ ಬಗ್ಗೆ ಸರಕಾರ ಚಿಂತಿಸುವುದಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿದ ಭಾರತೀಯ ಮಝ್ದೂರ್ ಸಂಘ್ ನಾಯಕ ರಜೀಂದರ್ ಸೋನಿ ಹೇಳಿದರು.












