ರೈತರ ದಿಲ್ಲಿ ಚಲೋ ಪ್ರತಿಭಟನೆ: ವಾಹನವನ್ನೇರಿ ಜಲ ಫಿರಂಗಿ ನಿಲ್ಲಿಸಿದ ಯುವ ಪ್ರತಿಭಟನಾಕಾರ- ವಿಡಿಯೋ ವೈರಲ್

0
1038

ಸನ್ಮಾರ್ಗ ವಾರ್ತೆ

ನರೇಂದ್ರ ಮೋದಿ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿಯತ್ತ ಸಾಗುವಾಗ ಭಾರಿ ಪೊಲೀಸ್ ಮತ್ತು ಅರೆಸೈನಿಕ ನಿಯೋಜನೆ, ಜಲ ಫಿರಂಗಿಗಳು, ಬ್ಯಾರಿಕೇಡ್‌ಗಳು ಮತ್ತು ಬಂಧನಗಳನ್ನು ಎದುರಿಸಬೇಕಾಯಿತು.

ಈ ಎಲ್ಲ ಅಡೆತಡೆಗಳ ಹೊರತಾಗಿಯೂ, ಅನೇಕ ರೈತರು ಮೆರವಣಿಗೆಯನ್ನು ಮುಂದುವರೆಸಿದರು. ಪಂಜಾಬ್‌ನಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿ ವೃದ್ಧ ಮಹಿಳಾ ಪ್ರತಿಭಟನಾಕಾರರಿಂದ ಹಿಡಿದು, ರಸ್ತೆಯ ಮೇಲೆ ಜಲ ಫಿರಂಗಿಗಳಿಗೆ ಎದೆಯೊಡ್ಡಿ ಕುಳಿತ ಇಬ್ಬರು ರೈತರು ಸೇರಿದಂತೆ ಹಲವಾರು ಚಿತ್ರಗಳು ಪ್ರತಿಭಟನಾಕಾರರ ರೈತರ ಸ್ಥಿತಿಸ್ಥಾಪಕತ್ವದ ಪ್ರತಿನಿಧಿಯಾದವು.

ಆದರೆ, ಕುರುಕ್ಷೇತ್ರದ್ದು ಎಂಬುದಾಗಿ ಹೇಳಲಾದ ವಿಡಿಯೋವೊಂದರಲ್ಲಿ ನವದೀಪ್ ಸಿಂಗ್ ಎಂಬ ಯುವ ಪ್ರತಿಭಟನಾಕಾರನು ರೈತರ ಮೇಲೆ ರಭಸದಿಂದ ಹರಿಯುತ್ತಿದ್ದ ಜಲಫಿರಂಗಿಗಳನ್ನು ತಡೆಯಲು ಪೋಲಿಸರ ಲಾಠಿಗೂ ಏಟಿಗೂ ಬಗ್ಗದೇ ಜಲ ಫಿರಂಗಿ ವಾಹನವನ್ನೇರಿ ಟ್ಯಾಪ್ ಆಫ್ ಮಾಡಿ ಪ್ರತಿಭಟನಕಾರರ ಟ್ರಾಕ್ಟರ್‌ನಲ್ಲಿ ನೆಗೆಯುವ ಮೂಲಕ ಹಲವಾರು ಪ್ರತಿಭಟನಾಕಾರ ರೈತರಿಗೆ ಸಹಾಯ ಮಾಡಿರುವ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನ್ನ ತಂದೆಯೊಂದಿಗೆ ನವದೀಪ್ ಸಿಂಗ್ ರೈತ ವಿರೋಧಿ ಕಾನೂನಿನ ವಿರುದ್ಧ ಪ್ರತಿಭಟನಾ ನಿರತರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.