ಸರಗಳ್ಳನೊಂದಿಗೆ ಕಾದಾಡಿ ಗೆದ್ದ ಪುಣೆಯ ಹತ್ತರ ಪೋರಿ: ವಿಡಿಯೋ ವೈರಲ್

0
184

ಸನ್ಮಾರ್ಗ ವಾರ್ತೆ

ಪುಣೆ: ಅಜ್ಜಿಯ ಬಂಗಾರದ ಸರವನ್ನು ಬಲವಂತದಿಂದ ಕಿತ್ತುಕೊಂಡು ಹೋಗಲು ಬಂದವರ ವಿರುದ್ಧ 10 ವರ್ಷದ ಪೋರಿಯೊಬ್ಬಳು ಸೆಣಸಾಡಿದ ಕಥೆ ಇದು..

60 ವರ್ಷದ ಲತಾ ಗಾಗ್ ಮತ್ತು 10 ವರ್ಷದ ಅವರ ಮೊಮ್ಮಗಳು ಕಳೆದ ವಾರ ಪುಣೆಯ ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಲತಾ ಗಾಗ್ ಅವರ ಕೊರಳಲ್ಲಿರುವ ಚಿನ್ನದ ಸರವನ್ನು ಕಬಳಿಸಲು ಬೈಕಲ್ಲಿ ಬಂದವರು ಯತ್ನಿಸಿದ್ದಾರೆ. ಹಾಗೆ ಮಾಡುವುದಕ್ಕಿಂತ ಮೊದಲು ಆ ಬೈಕಿನವರು ದಾರಿಯ ಬಗ್ಗೆ ಇವರಲ್ಲಿ ವಿಚಾರಿಸಿದ್ದಾರೆ ಮತ್ತು ಆ ಸಮಯದಲ್ಲಿ ಅವರ ಬಳಿಯಲ್ಲಿ ಬೈಕ್ ನಿಲ್ಲಿಸಿದ್ದಾರೆ.. ಕ್ಷಣ ಮಾತ್ರದಲ್ಲಿ ಅಜ್ಜಿಯ ಕೊರಳಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ.. ಲತಾ ಇದನ್ನು ವಿರೋಧಿಸಿದ್ದಾರೆ. ಇದನ್ನು ಕಂಡ 10 ವರ್ಷದ ಬಾಲೆ ಓಡಿಬಂದು ಕೈಯಲ್ಲಿದ್ದ ವಸ್ತುವಿನಿಂದ ದರೋಡೆಕೋರನ ಮುಖಕ್ಕೆ ಗುದ್ದಿದ್ದಾಳೆ.. ಆಗ ಅಜ್ಜಿಯೂ ಆ ದರೋಡೆಕೋರಗೆ ಹೊಡೆದಿದ್ದಾಳೆ. ಹೀಗೆ ಇಬ್ಬರಿಂದಲೂ ಹೊಡೆತ ತಿಂದ ದರೋಡೆಕೋರ ಪಲಾಯನ ಮಾಡಿದ್ದಾನೆ.