“ಸಾಮರಸ್ಯ ಸಹಬಾಳ್ವೆ ಸಂಗಮ”: ಹುಣಸೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಸಾರ್ವಜನಿಕ ಸಭೆ

0
8

ಸನ್ಮಾರ್ಗ ವಾರ್ತೆ

ಹುಣಸೂರು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸಾಮರಸ್ಯ, ಸಹಬಾಳ್ವೆ, ಸಂಗಮ ಎಂಬ ವಿಷಯದಡಿ ಸ್ಥಳೀಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಯಿತು.

ಹಿರಿಯ ಪತ್ರಕರ್ತ ಬಿ. ಎಂ ಹನೀಫ್ ಉದ್ಘಾಟನಾ ಭಾಷಣ ಮಾಡಿದರು, ರಿಯಾಝ್ ರೋಣ ಸಹ ಕಾರ್ಯದರ್ಶಿ ಜ.ಇ ಹಿಂದ್ ಕರ್ನಾಟಕ, ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಹೆಚ್ .ಪಿ. ಮಂಜುನಾಥ್ ಶಾಸಕರು ಹುಣಸೂರು, ಅಧ್ಯಕ್ಷೀಯ ಭಾಷಣದಲ್ಲಿ “ಸಾಮಾನ್ಯವಾಗಿ ಚುನಾವಣೆಯ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಸಮುದಾಯದ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಆದರೆ ಇಲ್ಲಿ ಒಟ್ಟು ಸಮಾಜದ ಹಿತವನ್ನು ಬಯಸುವ ಸಹಬಾಳ್ವೆ , ಶಾಂತಿ, ಸಾಂಬಾರಸ್ಯದ ಸ್ಥಾಪನೆಗಾಗಿ ಹೋರಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದು ನುಡಿದರು .

ಈ ಸಂದರ್ಭದಲ್ಲಿ ಹೊಸೂರು ಕುಮಾರ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ, ಮೈಸೂರು, ಎಚ್. ಎಸ್ ವರದರಾಜು ಹಿರಿಯ ದಲಿತ ಮುಖಂಡರು, ಝೈನುಲ್ ಅಬಿದೀನ್ ಜಿಲ್ಲಾ ಸಂಚಾಲಕರು ಜ.ಇ.ಹಿಂದ್ ಹಿಂದ್ ಚಾಮರಾಜನಗರ, ಮುಫ್ತಿ ಮುದಬ್ಬಿರ್ ಅಹ್ಮದ್, ಸ್ಥಳೀಯ ಇಸ್ಲಾಮಿ ವಿದ್ವಾಂಸರು, ಲಿಬ್ಸಿಂಗ್ ಬೌದ್ಧ ಬಿಕ್ಕುಗಳು ಗುರುಪುರ, ಕಾರ್ಯಕ್ರಮದ ಸಂಚಾಲಕ ಜೆ. ಮಹದೇವ್, ಸಾಲಿಡಾರಿಟಿ ಯೂತ್ ಮೂವ್ಮೆಂಟ್‌ನ ಸ್ಥಾನೀಯ ಅಧ್ಯಕ್ಷ ಮುದಸ್ಸಿರ್ ಖಾನ್, ಜ.ಇ.ಹಿಂದ್ ಸದಸ್ಯ ಅಝಿಝುಲ್ಲಾ ಮುಂತಾದರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here