ಉಮ್ರಾ: ರಮಝಾನ್ ಮೊದಲ 20 ದಿನಗಳಿಗೆ ವೀಸಾ ಅನುಮತಿ

0
997

ಸನ್ಮಾರ್ಗ ವಾರ್ತೆ


ಸೌದಿ ಅರೇಬಿಯಾ: ರಮಝಾನ್ ತಿಂಗಳಲ್ಲಿ ಉಮ್ರಾ ನಿರ್ವಹಿಸಲು ಬಯಸುವವರಿಗೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಪರವಾನಿಗೆ ನೀಡಿದೆ. ನುಸುಕ್ ಮತ್ತು ತವಕಲ್‌ನಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಉಮ್ರಾ ಬುಕಿಂಗ್ ಮಾಡಬೇಕಾಗಿದೆ.


ರಮಝಾನಿನ ಮೊದಲ 20 ದಿವಸಗಳಿಗೆ ಬುಕಿಂಗ್ ಸೌಲಭ್ಯವನ್ನು ಇದೀಗ ಆರಂಭಿಸಲಾಗಿದೆ. ಕೊನೆಯ 10 ದಿನಗಳಿಗೆ ಬುಕಿಂಗ್ ಸೌಲಭ್ಯವನ್ನು ನಂತರ ಆರಂಭಿಸಲಾಗುವುದು.

ಉಮ್ರಾ ವೀಸಾಗಳ ಜೊತೆಗೆ ಇತರ ವೀಸಾಗಳ ಮೂಲಕ ಸೌದಿಗೆ ಆಗಮಿಸುವವರಿಗೂ ಉಮ್ರಾ ನಿರ್ವಹಿಸುವುದಕ್ಕೆ ಈ ಬಾರಿ ಅನುಮತಿ ನೀಡಿರುವುದರಿಂದ ಜನ ನಿಭಿಡತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.