ಕೊರೋನ ಬಾಧಿಸದ 32 ಮಂದಿಗೆ ಬ್ಲ್ಯಾಕ್ ಫಂಗಸ್: ಮಿತಿಮೀರಿದ ಸ್ಟಿರಾಯ್ಡ್ ಸೇವನೆ ಕಾರಣ ಎಂದ ವೈದ್ಯರು

0
508

ಸನ್ಮಾರ್ಗ ವಾರ್ತೆ

ಅಮೃತಸರ: ಪಂಜಾಬಿನಲ್ಲಿ ಈವರೆಗೆ 158 ಮಂದಿಗೆ ಬ್ಲಾಕ್‍ ಫಂಗಸ್ ಬಂದಿದೆ ಎಂದು ವರದಿಯಾಗಿದ್ದು ಇವರಲ್ಲಿ, 126 ಮಂದಿಗೆ ಕೊರೋನ ಬಂದಿತ್ತಾದರೂ, 32 ಮಂದಿಗೆ ಕೊರೋನ ವೈರಸ್ ತಗಲಿಲ್ಲ. ಆದರೂ ಬ್ಲ್ಯಾಕ್ ಫಂಗಸ್ ಬಂದಿದೆ. ಇದಕ್ಕೆ ಮಿತಿಮೀರಿದ ಸ್ಟಿರಾಯ್ಡ್ ಬಳಕೆ ಕಾರಣವೆಂದು ವೈದ್ಯರು ಅಂದಾಜಿಸಿದ್ದಾರೆ.

ಕೊರೋನ ಕಾರಣದಿಂದ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುವುದಿಲ್ಲ. ಸ್ಟಿರಾಯ್ಡ್ ಮಿತಿಮೀರಿ ಬಳಸುವುದರಿಂದ ಹೀಗಾಗುತ್ತಿದೆ ಎಂದು ವೈದ್ಯರು ಹೇಳಿದರು. ಫಂಗಸ್ ದೃಢೀಕರಿಸಿದ 32 ಮಂದಿಗೆ ವಿವಿಧ ಅಸೌಖ್ಯಗಳಿವೆ. ಇವರು ಇದಕ್ಕಾಗಿ ಸ್ಟಿರಾಯ್ಡ್ ಉಪಯೋಗಿಸುತ್ತಿದ್ದಾರೆ. ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗಿ ಇಂತಹವರ ಮೇಲೆ ಬ್ಲ್ಯಾಕ್ ಫಂಗಸ್ ದಾಳಿಯಿಟ್ಟಿದೆ ಎಂದು ಪಂಜಾಬ್ ನೋಡಲ್ ಅಧಿಕಾರಿ ಡಾ. ಗನಗದೀಪ ಸಿಂಗ್ ಹೇಳಿದರು.

ಬ್ಲಾಕ್ ಫಂಗಸ್ ಒಂದು ಅಂಟು ರೋಗವಲ್ಲ. ರೋಗ ಲಕ್ಷಣ ತಿಳಿದ ಕೂಡಲೇ ಚಿಕಿತ್ಸೆ ಶುರುಮಾಡಿದರೆ ಇದರಿಂದ ಗುಣಮುಖರಾಗಬಹುದು. ಮಿತಿಮೀರಿ ಸ್ಟಿರಾಯ್ಡ್ ಉಪಯೋಗಿಸುವವರಿಗೆ ಬ್ಲಾಕ್ ಫಂಗಸ್ ಬಾಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದರು.

ಸ್ಟಿರಾಯಿಡ್ ಹೆಚ್ಚೆಚ್ಚು ಬಳಸಿದ್ದು ಇದಕ್ಕೆ ಕಾರಣ. ವೈದ್ಯರಿಗೆ ಸ್ಟಿರಾಯ್ಡ್ ಬದಲು ಬೇರೆ ಮದ್ದು ಕೊಡಲು ಹೇಳಲಾಗಿದೆ. ಇತರ ಮದುಗಳನ್ನು ಉಪಯೋಗಿಸಿ ಚಿಕಿತ್ಸೆಯ ರೀತಿ ತೀರ್ಮಾನಿಸಬೇಕೆಂದು ಡಾ. ಕೆ.ಕೆ. ತಲ್ವಾರ್ ಕೂಡ ಹೇಳಿದರು. ಮೇ 19ಕ್ಕೆ ಪಂಜಾಬ್ ಸರಕಾರ ಬ್ಲಾಕ್ ಪಂಗಸ್ ಅನ್ನು ಸಾಂಕ್ರಾಮಿಕ ರೋಗ ವ್ಯಾಪ್ತಿಗೆ ಸೇರಿಸಿತ್ತು. ನಂತರ ಗ್ರಾಮಗಳಲ್ಲಿ ಈ ರೋಗ ಹರಡದಂತೆ ನಿಯಂತ್ರಿಸಲು ಬೇಕಾದ ವ್ಯವಸ್ಥೆಯನ್ನು ಸರಕಾರ ಮಾಡುತ್ತಿದೆ.