ಇರಾನಿನಲ್ಲಿ ಸಾವಿರಾರು ಕೈದಿಗಳ ಬಿಡುಗಡೆ

0
211

ಸನ್ಮಾರ್ಗ ವಾರ್ತೆ

ಟೆಹ್ರಾನ್, ಫೆ. 6: ಇರಾನಿನ ಕ್ರಾಂತಿಯ ವರ್ಷಾಚರಣೆಗೆ ಸಂಬಂಧಿಸಿ ಸಾವಿರಾರು ಕೈದಿಗಳನ್ನು ಬಿಡಗಡೆಗೊಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಇರಾನಿನ ಪರಮೋಚ್ಚ ನಾಯಕ ಆಯತುಲ್ಲ ಅಲಿ ಖಾಮಿನೈ ಯವರ ವಿಶೇಷ ಅಧಿಕಾರದ ಪ್ರಕಾರ ನಡೆದಿದೆ. ಬಿಡುಗಡೆಗೊಂಡವರಲ್ಲಿ ಹೆಚ್ಚಿನವರು ಸರಕಾರದ ನೀತಿಯನ್ನು ವಿರೋಧಿಸಿ ಪ್ರತಿಭಟಿಸಿದವರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಇರಾನಿನಲ್ಲಿ ಇಂತಹ ಬಿಡುಗಡೆ ಕ್ಷಮೆ ಯಾಚಿಸಿದವರಿಗೆ ಮಾತ್ರ ದೊರೆಯುತ್ತದೆ. ಹಲವು ಕೈದಿಗಳು ತಮ್ಮಿಂದಾದ ಪ್ರತಿಭಟನೆಗೆ ಕ್ಷಮೆ ಯಾಚಿಸುತ್ತಿದ್ದಾರೆ ಎಂದು ನ್ಯಾಯಾಂಗ ಮುಖ್ಯಸ್ಥರು ಪರಮೋನ್ನತ ನಾಯಕ ಖಾಮಿನೈ ಯವರಿಗೆ ಪತ್ರ ಬರೆದಿದ್ದರು. ಸೆಪ್ಟಂಬರಿನಲ್ಲಿ ಸರಕಾರದ ವಿರುದ್ಧ ಹೋರಾಟ ನಡೆದಿತ್ತು. 20,00ಕ್ಕೂ ಹೆಚ್ಚು ಪ್ರತಿಭಟನಕಾರರು ಜೈಲು ಪಾಲಾಗಿದ್ದರು.