ಮೋದಿ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ: 40 ವರ್ಷಗಳಲ್ಲಿ ಮೊದಲ ಬಾರಿ ಆರ್ಥಿಕ ಕುಸಿತ ಆರೋಪ

0
386

ಸನ್ಮಾರ್ಗ ವಾರ್ತೆ

ನವದೆಹಲಿ,ಆ.31:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರ್ಥಿಕತೆಯ ಮೇಲೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ವಿಡಿಯೋ ಸರಣಿಯನ್ನು ಪ್ರಾರಂಭಿಸಿದ್ದಾರೆ.

ಸೋಮವಾರ ಟ್ವಿಟ್ಟರ್‌ನಲ್ಲಿ ಮೊದಲ ವಿಡಿಯೋ ಹಂಚಿಕೊಂಡ ರಾಹುಲ್, “ದೇಶ ಎದುರಿಸುತ್ತಿರುವ ಆರ್ಥಿಕ ದುರಂತದ ದುರದೃಷ್ಟಕರ ಸತ್ಯ ಇಂದು ದೃಢೀಕರಿಸಲ್ಪಡುತ್ತದೆ. 40 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ಆರ್ಥಿಕತೆಯು ಭಾರಿ ಆರ್ಥಿಕ ಹಿಂಜರಿತದಲ್ಲಿದೆ. ಸತ್ಯ ನಿರಾಕರಿಸುತ್ತಿರುವವರು ದೇವರನ್ನು ದೂಷಿಸುತ್ತಿದ್ದಾರೆ.” ಎಂದು ಟ್ವೀಟ್ ಮಾಡಿದ್ದಾರೆ.

“ಸರ್ಕಾರವನ್ನು ನಡೆಸಲು ಪ್ರಧಾನ ಮಂತ್ರಿಗೆ ಮಾಧ್ಯಮ ಬೇಕು, ಮಾರ್ಕೆಟಿಂಗ್ ಅಗತ್ಯವಿದೆ. ಮಾಧ್ಯಮ-ಮಾರ್ಕೆಟಿಂಗ್ ಅನ್ನು 15-20 ಜನರು ಮಾಡುತ್ತಾರೆ. ಅನೌಪಚಾರಿಕ ವಲಯದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳಿವೆ. ಅವರು ಈ ವಲಯವನ್ನು ಮುರಿದು ಹಣವನ್ನು ಕಿತ್ತುಕೊಳ್ಳಲು ಬಯಸುತ್ತಾರೆ. ಆದರೆ, ಇದರಿಂದ ಹಿಂದೂಸ್ತಾನದಲ್ಲಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ ಅನೌಪಚಾರಿಕ ವಲಯವು 90%ಕ್ಕಿಂತ ಹೆಚ್ಚು ಉದ್ಯೋಗವನ್ನು ನೀಡುತ್ತದೆ.”

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.