ಪಾಕಿಸ್ತಾನ, ಅಫ್ಘಾನಿಸ್ತಾನಗಳು ಭಾರತಕ್ಕಿಂತ ಉತ್ತಮವಾಗಿ ಕೊರೋನವನ್ನು ಪ್ರತಿರೋಧಿಸಿವೆ- ಕೇಂದ್ರ ಸರಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

0
373

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.16: ಕೊರೋನ ಮಹಾಮಾರಿ ಪ್ರತಿರೋಧದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನಗಳು ಕೂಡ ಭಾರತಕ್ಕಿಂತ ಚೆನ್ನಾಗಿ ಕೊರೋನವನ್ನು ಎದುರಿಸಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭಾರತದ ಜಿಡಿಪಿ ಬಾಂಗ್ಲಾದೇಶಕ್ಕಿಂತ ಹಿಂದುಳಿಯಳಿದೆ ಎಂಬ ಅಂತಾರಾಷ್ಟ್ರೀಯ ನಾಣ್ಯ ನಿಧಿಯ ವರದಿಯನ್ನು ರಾಹುಲ್ ಟ್ವೀಟ್ ಮಾಡಿ ಟೀಕೆ ಮಾಡಿದ್ದಾರೆ.

ಕೊರೋನ ನಿಭಾಯಿಸುವಲ್ಲಿ ಕೇಂದ್ರ ಸರಕಾರದಿಂದ ಲೋಪ ಆಗಿದೆ ಎಂದು ಕಾಂಗ್ರೆಸ್ ನಿರಂತರ ಆರೋಪಿಸುತ್ತಲೇ ಇದೆ. ಕೊರೋನ ಪ್ರತಿರೋಧ ಯೋಜನೆ ಕೂಡ ಸರಕಾರದ ಬಳಿಯಿಲ್ಲ ಎಂದು ಅವರು ಈ ಹಿಂದೆ ಹೇಳಿದ್ದರು. ಕೊರೋನ ಪರಿಸ್ಥಿತಿಯಲ್ಲಿ ಪ್ರಸ್ತುತ ಆರ್ಥಿಕ ಚಾಲ್ತಿ ವರ್ಷದಲ್ಲಿ ಭಾರತದ ಜಿಡಿಪಿ ಶೇ.103 ರಷ್ಟು ಕುಸಿಯಲಿದೆ ಎಂದು ಐಎಂಎಫ್ ಹೇಳಿತ್ತು. ಜೂನ್‍ನ ಲೆಕ್ಕಕ್ಕಿಂತಲೂ ಕುಸಿತವಿದು.

ಧ್ರುತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹೆಚ್ಚು ಹಿನ್ನಡೆ ಅನುಭವಿಸಬೇಕಾಗುತ್ತಿದೆ. ಇದು ಭಾರತ ಆಗಿದೆ ಎಂದು ಐಎಂಎಫ್ ಹೇಳಿತ್ತು. ಅಫ್ಘಾನಿಸ್ತಾನದ ಜಿಡಿಪಿಯಲ್ಲಿ ಶೇ.5ರಷ್ಟು ಕುಸಿತ ಹೇಳಲಾಗುತ್ತಿದೆ. ಪಾಕಿಸ್ತಾನದ ಜಿಡಿಪಿಯಲ್ಲಿ 0.4 ಶೇಕಡ ಕುಸಿತ ಆಗಲಿದೆ. ಪಾಕಿಸ್ತಾನದ ಒಟ್ಟು ರೋಗಿಗಳ ಸಂಖ್ಯೆ 3,21,877, ಅಫ್ಘಾನಿಸ್ತಾನದಲ್ಲಿ 40,026 ರೋಗಿಗಳಿದ್ದಾರೆ. ಇದೇ ವೇಳೆ ಭಾರತಕ್ಕಿಂತ ಕಡಿಮೆ ಜನಸಂಖ್ಯೆಯ ದೇಶಗಳು ಇವು.