ಕೊರೋನಾ ವ್ಯಾಕ್ಸಿನ್ ನಾವು ಉಪಯೋಗಿಸುವುದಿಲ್ಲ: ಛತ್ತೀಸ್ ಗಡ ಸರಕಾರ

0
470

ಸನ್ಮಾರ್ಗ ವಾರ್ತೆ

ರಾಯ್‍ಪುರ: ಕೊರೋನಾ ವಾಕ್ಸಿನ್ ವಿತರಣೆಗೆ ಅನುಮತಿ ನೀಡುವುದಿಲ್ಲ ಎಂದು ಛತ್ತೀಸ್ ಗಡ ಸರಕಾರ ಹೇಳಿದೆ. ಮೂರನೇ ಹಂತದ ಪರೀಕ್ಷೆ ಪೂರ್ತಿಯಾಗಿಲ್ಲ. ಆದ್ದರಿಂದ ಕೊವಾಕ್ಸಿನ್ ಕೊಡಲು ಬಿಡುವುದಿಲ್ಲ ಎಂದು ಛತ್ತೀಸ್ ಸರಕಾರ ವಾದಿಸಿದೆ.

ಆರೋಗ್ಯ ಸಚಿವ ಟಿಎಸ್ ಸಿಂಗ್ ಈ ವಿಷಯವನ್ನು ತಿಳಿಸಿದ್ದು, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಮೂರು ಟ್ರಯಲ್‍ಗಳನ್ನು ಪೂರ್ತಿ ಮಾಡಿದ ದಾಖಲೆಗಳಿಲ್ಲ. ಕೇಂದ್ರ ಸರಕಾರ ತಮಗೆ ವ್ಯಾಕ್ಸಿನ್ ಕೊಟ್ಟರೆ ಅದನ್ನು ಉಪಯೋಗಿಸುವುದಿಲ್ಲ ಎಂದು ಛತ್ತೀಸ್ ಗಡ ಸರಕಾರ ನಿಲುವು ವ್ಯಕ್ತಪಡಿಸಿದೆ.

ಭೋಪಾಲದಲ್ಲಿ ಕೊವಾಕ್ಸಿನ್ ಸ್ವೀಕರಿಸಿದ ಆರೋಗ್ಯ ಕಾರ್ಯರ್ತ ಮೃತಪಟ್ಟ ಘಟನೆಯನ್ನು ಛತ್ತೀಸ್ ಗಡ ಆರೋಗ್ಯ ಮಂತ್ರಿ ಟಿಎಸ್ ಸಿಂಗ್ ದಿಯೊ ಬೆಟ್ಟು ಮಾಡಿದರು. ಆದರೆ ವ್ಯಾಕ್ಸಿನ್‍ಗೂ ಸಾವಿಗೂ ಸಂಬಂಧವಿಲ್ಲ. ಸಾಮಾಜಿಕ ಕಾರ್ಯಕರ್ತನ ಹೃದಯ ಕಾಯಿಲೆ ಸಾವಿಗೆ ಕಾರಣ ಎಂದು ಭಾರತ್ ಬಯೊಟೆಕ್ ತಿಳಿಸಿತ್ತು.

ಕೊವಿಶೀಲ್ಡ್ ಕೊರೊನ ವ್ಯಾಕ್ಸಿನ್ ಜೊತೆಗೆ ಕೇಂದ್ರ ಸರಕಾರ ತುರ್ತಾಗಿ ಅನುಮತಿಯನ್ನು ಕೊವಾಕ್ಸಿನ್‍ಗೂ ನೀಡಿತ್ತು. ಭಾರತ್ ಬಯೋಟೆಕ್ ಸ್ಥಳೀಯವಾಗಿ ಇದನ್ನು ಅಭಿವೃದ್ದಿ ಪಡಿಸಿದೆ. ಮೂರನೇ ಹಂತದ ಪರೀಕ್ಷೆ ಪೂರ್ಣವಾಗಿಲ್ಲ.ಆದ್ದರಿಂದ ಕೊವಾಕ್ಸಿನ್ ಉಪಯೋಗಿಸಲು ಸಾಧ್ಯವಿಲ್ಲ ಎಂದು ಛತ್ತೀಸ್ ಗಡ ಸರಕಾರ ಹೇಳುತ್ತಿದೆ.