ರಾಜೀವ್ ಗಾಂಧಿ ಕೊಲೆ ಪ್ರಕರಣ: ಪೇರರಿವಾಳ್‍ಗೆ ಒಂದು ತಿಂಗಳ ಪರೋಲ್

0
428

ಸನ್ಮಾರ್ಗ ವಾರ್ತೆ

ಚೆನ್ನೈ,ನ.8: ರಾಜೀವ್ ಗಾಂಧಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಪೇರರಿವಾಳ್‍ಗೆ ಒಂದು ತಿಂಗಳ ಪರೋಲ್ ಸಿಕ್ಕಿದೆ ಎಂದು ವೆಲ್ಲೂರ್ ಸೆಂಟ್ರಲ್ ಜೈಲು ಅಧಿಕಾರಿಗಳು ತಿಳಿಸಿದರು. ತಂದೆಯ ಆರೋಗ್ಯ ಕೆಟ್ಟು ಹೋಗಿದ್ದು ಈ ಕ್ರಮ ಜರಗಿಸಲಾಗಿದೆ. ಕಳೆದ ವರ್ಷ ಮದ್ರಾಸ್ ಹೈಕೋರ್ಟು ಆದೇಶ ಪ್ರಕಾರ ಎರಡು ತಿಂಗಳ ಪರೋಲ್ ನೀಡಲಾಗಿತ್ತು.

ಪೇರರಿವಾಳನ್ ಸಹಿತ ಏಳು ಮಂದಿ ಆರೋಪಿಗಳು 28 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಪುತ್ರಿಯ ಮದುವೆಯ ಹಿನ್ನೆಲೆಯಲ್ಲಿ ಇನ್ನೋರ್ವ ಆರೋಪಿ ನಳಿನಿಗೂ ಒಂದೂವರೆ ತಿಂಗಳ ಪರೋಲ್ ಲಭಿಸಿತ್ತು. ಇನ್ನೋರ್ವ ಆರೋಪಿ ರಾಬರ್ಟ್ ಪರಸು ಮಗನ ಮದುವೆಗಾಗಿ ಪರೋಲ್ ಆಗ್ರಹಿಸಿ ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.