ರಕ್ಷಣಾ ಪುನರ್ ವಸತಿಕಾರ್ಯಗಳನ್ನು ಗಡಿಗಳಿಗೆ ಮಾತ್ರ ಸೀಮಿತಗೊಳಿಸಬೇಡಿ: ಜ.ಇ.ಹಿಂದ್

0
699

ನವದೆಹಲಿ: ಜಮಾಅತೆ ಇಸ್ಲಾಮೀ ಹಿಂದ್‍ನ ಮಾಸಿಕ ಸಭೆಯು ನವ ದೆಹಲಿಯ ಜಮಾಅತ್ ಕೇಂದ್ರ ಕಚೇರಿ ಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೇರಳದಲ್ಲಾದ ಜಲಪ್ರಳಯವನ್ನು ರಾಷ್ಟ್ರೀಯ ದುರಂತವಾಗಿ ಘೋಷಿಸಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್‍ನ ಉಪಾಧ್ಯಕ್ಷರಾದ ನುಸ್ರತ್ ಅಲಿಯವರು ಕೇಂದ್ರ ಸರಕಾರ ವನ್ನು ಆಗ್ರಹಿಸಿದರು. ಜಮಾಅತೆ ಇಸ್ಲಾಮೀ ಹಿಂದ್‍ನ ವಿವಿಧ ರಾಜ್ಯ ಘಟಕಗಳು ರಕ್ಷಣಾ ಕಾರ್ಯ ಹಾಗೂ ಪುನರ್ ವಸತಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವು ದನ್ನು ಅವರು ತಿಳಿಸಿದರು.

ಯುಎಇ ನೀಡಿದ ಸಹಾಯ ಹಸ್ತ ವನ್ನು ನಿರಾಕರಿಸಿದ ಕೇಂದ್ರ ಸರಕಾರದ ನಡೆಯ ಕುರಿತು ಪ್ರಶ್ನಿಸಲಾದಾಗ, ಜಮಾ ಅತ್ ನಾಯಕರು, ಸರಕಾರವು ಪುನರ್ ವಸತಿ ಕಲ್ಪಿಸಲು ಬೇಕಾದಷ್ಟು ಸಹಾಯ ಹಸ್ತವನ್ನು ನೀಡದೇ ಇತರರು ನೀಡಲು ಬಯಸುವ ಸಹಾಯವನ್ನು ಪಡೆದುಕೊಳ್ಳದೇ ಜನರನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡುತ್ತಿದೆ. ಇಂತಹ ದುರಂತ ಗಳು ಸಂಭವಿಸಿದಾಗ ಸರಕಾರವು ಸಹಾಯ ಸಹಕಾರಗಳನ್ನು ಗಡಿಗಳಾಚೆ ಯಿಂದಲೂ ಸ್ವೀಕರಿಸಬೇಕು. ಅದನ್ನು ಕೇವಲ ಗಡಿಯೊಳಗೆ ಮಾತ್ರವೇ ಸೀಮಿತ ಗೊಳಿಸಬಾರದು ಎಂದರು. ಈ ನಡುವೆ ಸಂಘಪರಿವಾರವು ಕೇರಳದಲ್ಲಿ ಮುಸ್ಲಿಮರು-ಕ್ರಿಶ್ಚಿಯನ್ನರು ಮಾತ್ರ ಸಂಕಷ್ಟ ದಲ್ಲಿದ್ದಾರೆ; ಅವರನ್ನು ನಿರ್ಲಕ್ಷಿಸಿ ಎಂದು ಹೇಳಿಕೆ ನೀಡುತ್ತಿರುವುದು ಬೆನ್ನಿನಲ್ಲಿಯೇ ಸರಕಾರ ಉದ್ದೇಶಪೂರ್ವಕವಾಗಿ ಯಾರದೋ ಸಂತೃಪ್ತಿ ಪಡೆಯಲು ಇಂತಹ ನಡೆಗಳನ್ನು ಕೈಗೊಳ್ಳುತ್ತಿದೆಯಲ್ಲದೇ ಕಾನೂನಾತ್ಮಕವಾಗಿ ದೇಣಿಗೆಗಳನ್ನು ಪಡೆಯಲು ಯಾವುದೇ ಅಡ್ಡಿಗಳು ಇರಲಿಕ್ಕಿಲ್ಲ ಎಂದೆನ್ನಿಸುತ್ತದೆ.

ಈ ಸಂದರ್ಭದಲ್ಲಿ 59 ದಿನಗಳ ಒಳಗಡೆ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ನೀಡಿದ ನ್ಯಾಯಾಂಗೀಯ ಶೀಘ್ರ ನಡೆ ಯನ್ನು ಜಮಾಅತ್ ಸ್ವಾಗತಿಸಿತಲ್ಲದೇ ಗುಂಪು ಹತ್ಯೆ ಪ್ರಕರಣಗಳು, ಕಥುವಾ, ಉನಾವೋ, ಹರ್ಯಾಣ-ದೆಹಲಿಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ನೀಡಲು ತಡ ಮಾಡಬಾರದು ಎಂದು ಆಗ್ರಹಿಸಿತು. ದೇಶದ್ರೋಹಿಗಳ ಹೆಸರಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರ ಬಂಧನ, ಅಸ್ಸಾಂ ಪೌರತ್ವ ವಿವಾದಗಳಿಗೆ ಸಂಬಂಧಿಸಿದ ವಿಷಯ ಗಳಲ್ಲಿ ಪತ್ರಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.