ನಂಬಿನಾರಾಯಣನ್‍ರನ್ನು ನಾಡದ್ರೋಹಿಯೆಂದು ಕತೆ ಕಟ್ಟಿದವರು ಯಾರು?

0
721

ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಗೆದ್ದಿದ್ದಾರೆ. ನಮ್ಮ ಲೆಕ್ಕದಲ್ಲಿ ಗೆಲ್ಲಲೇ ಬೇಕಾದ ಒಂದು ಪ್ರಕರಣದಲ್ಲಿ ಅವರು ಗೆದ್ದರು ಎನ್ನುವುದು ಇಲ್ಲಿ ಬಹಳ ಪ್ರಮುಖವಾಗುತ್ತದೆ. ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ನಂಬಿನಾರಾ ಯಣನ್, ಚಂದ್ರಶೇಖರ್ ಮತ್ತು ಅಂದಿನ ಕೇರಳ ಮುಖ್ಯಮಂತ್ರಿ ಕೆ. ಕರುಣಾಕರನ್ ಅನ್ಯಾಯಕ್ಕೆ ತುತ್ತಾದರು. ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟಿನ ಮೊರೆ ಹೋಗಿ ಕೇರಳ ಸರಕಾರದಿಂದ 50ಲಕ್ಷ ಜುಲ್ಮಾನೆ ಅಥವಾ ನಷ್ಟ ಪರಿಹಾರವನ್ನು ಪಡೆದುಕೊಂಡ ನಂಬಿನಾರಾಯಣನ್ ಕೇಸು ಗೆದ್ದ ಬಳಿಕ ಬಹಳ ಸ್ಥಿತ ಪ್ರತಿಜ್ಞೆಯಿಂದ ಸತ್ಯ ಗೆದ್ದಿದೆ, ಸುಳ್ಳು ಹೇಳಿದವರು ಸುಳ್ಳು ಹೇಳಿದ್ದೇವೆ ಎಂದು ಒಪ್ಪಿಕೊಂಡರೆ ಅಷ್ಟೇ ಸಾಕು ಎಂದು ಪ್ರತಿಕ್ರಿಯಿಸಿದ್ದಾರೆ. ಆಡ ಳಿತಯಂತ್ರವನ್ನು ದುರುಪ ಯೋಗಿಸಿ ಎಂತೆಂತಹವರನ್ನೂ ಚೆಂಡಾಡಬಹುದು ಎನ್ನುವುದಕ್ಕೆ ಒಂದು ಉದಾಹರಣೆಯಾಗಿ ಇಸ್ರೋ ಬೇಹುಗಾರಿಕೆ ಪ್ರಕರಣವನ್ನು ಸೂಚಿಸಬಹುದು. ನಕಲಿ ಎನ್‍ಕೌಂಟರ್, ಯಾರ್ಯಾರೊ ಬಡಪಾಯಿ ಗಳನ್ನು ಹಿಡಿದು ಭಯೋತ್ಪಾದಕರನ್ನಾಗಿ ಮಾಡು ವುದರ ಹಿಂದೆ ಇಂತಹ ಸಾಕಷ್ಟು ನಕಲಿ ಕಥೆ ಗಳಿರುತ್ತವೆ ಎನ್ನುವುದನ್ನು ಈ ಪ್ರಕರಣ ಸ್ಪಷ್ಟ ಪಡಿಸುತ್ತದೆ. ಇಲ್ಲಿ ನಂಬಿನಾರಾಯಣನ್, ಚಂದ್ರ ಶೇಖರ್ ಎನ್ನುವ ವಿಜ್ಞಾನಿಗಳ ಭವಿಷ್ಯ ಹಾಳಾದ ದ್ದಲ್ಲ. ದೇಶದ ಭವಿಷ್ಯವೇ ನಕಲಿ ಕತೆಗಾರರು ಹಾಳು ಮಾಡಿದರು ಎಂದು ಒಪ್ಪಬೇಕಾಗಿದೆ. ಪ್ರಕರಣದಲ್ಲಿ ವಿಜ್ಞಾನಿಗಳಾದ ನಂಬಿನಾರಾಯಣನ್, ಚಂದ್ರಶೇಖರ್, ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಮತ್ತು ಪೊಲೀಸಧಿಕಾರಿ ರಮಣ್ ಶ್ರೀವಾಸ್ತವ ಸಮಾಜದ ಮುಂದೆ ಅಪ ಮಾನಿತರಾದರು. ಕರುಣಾಕರನ್ ಚಂದ್ರಶೇಖರ್, ನಂಬಿನಾರಾಯಣನ್ ಪ್ರಕರಣದ ದೆಸೆಯಲ್ಲಿ ರಾಜೀನಾಮೆ ನೀಡಬೇಕಾಯಿತು. ರಮಣ್ ಶ್ರೀವಾಸ್ತವ ಸ್ವಲ್ಪ ಕಾಲದ ನಂತರ ವರ್ಗಾವಣೆ ಗೊಂಡಿದ್ದರು. ಜತೆಗೆ ಬೇಹುಗಾರ್ತಿಯರೆಂದು ಗುರುತಿಸಿಕೊಂಡ ಮಾಲಿಯ ಇಬ್ಬರು ನಟಿಯರು ಪೊಲೀಸ್ ದೌರ್ಜನ್ಯ, ಅಪಮಾನ ಸಹಿಸಬೇಕಾಯಿತು. ಈಗ ನಂಬಿನಾರಾಯಣನ್ ಮೂಲಕ ಇವರೆಲ್ಲ ಸುಪ್ರೀಂ ಕೋರ್ಟಿನಲ್ಲಿ ಗೆದ್ದಿದ್ದಾರೆ ನಿಜ. ಆದರೆ ಇವರೆಲ್ಲ ಅನ್ಯಾಯವಾಗಿ ಸ್ವಾರ್ಥಿಗಳು ಹೆಣೆದಿದ್ದ ಸುಳ್ಳು ಕತೆಗೆ ಆಗ ಬಲಿಯಾಗಿದ್ದರೆನ್ನು ವುದು ಚಿಕ್ಕ ವಿಷಯವಲ್ಲ. ಆದ್ದರಿಂದ ಸುಪ್ರೀಂ ಕೋರ್ಟು ಹೇಳಿರುವಂತೆ ಈ ಬೇಹುಗಾರಿಕೆ ಪ್ರಕರಣ ಎಲ್ಲಿ ಹುಟ್ಟುಪಡೆಯಿತು, ಯಾರಿಗಾಗಿ, ಯಾರಿಂದಾಗಿ ಹುಟ್ಟಿಕೊಂಡಿತು ಎಂಬುದು ತನಿಖೆಯಾಗಲೇಬೇಕು. 24 ವರ್ಷದ ಹಿಂದೆ ಘೋರ ಅಪರಾಧ ಎಸಗಿದ ಕಥೆಗಾರರನ್ನು ಇನ್ನಾದರೂ ದೇಶಕ್ಕೆ ಮಾದರಿ ಯಾಗುವಂತೆ ಶಿಕ್ಷಿಸಬೇಕಾಗಿದೆ. ಆಗಲೇ ನ್ಯಾಯ ಸಂಪೂರ್ಣವಾಗಿ ಗೆದ್ದಿತು ಎನ್ನಬಹುದು.

ಇಸ್ರೋ ಬೇಹುಗಾರಿಕೆ ಪ್ರಕರಣ ಮರಿಯಂ ರಶೀದಾ ಎನ್ನುವ ಮಾಲಿ ಮೂಲದ ನಟಿ ವೀಸಾದ ಅವಧಿ ಮುಗಿದೂ ತಂಬಾನ್ನೂರಿನ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಕ್ಕಾಗಿ ಪೊಲೀಸರು ಬಂಧಿಸುವ ಮೂಲಕ ಆಗಿತ್ತು. ನಂತರ ಮರಿಯಂ ರಶೀದಾ ಬಳಿ ಬೇಹುಗಾರಿಕೆಗೆ ಸಂಬಂಧಿಸಿದ ಕೆಲವು ಕೋಡ್‍ಗಳು ಅವರ ಡೈರಿಯಲ್ಲಿ ಪತ್ತೆಯಾಗಿದೆ, ಮಹಿಳೆ ಬೇಹುಗಾರ್ತಿಯಾಗಿದ್ದಾರೆ ಎಂದು ಪ್ರಕರಣ ತಿರುವು ಪಡೆದುಕೊಂಡಿತು. ಹೀಗೆ ಇಸ್ರೋ ಬೇಹುಗಾರಿಕೆ ಪ್ರಕರಣ ಆರಂಭಗೊಂಡು ವಿಜ್ಞಾನಿ ನಂಬಿನಾರಾಯಣನ್ ಚಂದ್ರ ಶೇಖರ್ ಸಹಿತ ಕೆಲವರನ್ನು ಸುತ್ತು ಹಾಕಿತು. ಇವರು ಸೆಟಲೈಟ್ ರಹಸ್ಯಗಳನ್ನು ಮಹಿಳೆಗೆ ಒದಗಿಸುತ್ತಿದ್ದಾರೆ ಎನ್ನುವ ಕತೆ ಬಂತು. ಅಂದು ಖಾಸಗಿ ಟಿವಿ ಮಾಧ್ಯಮ ಗಳಿರಲಿಲ್ಲ. ಆದರೆ ಕತೆಹೆಣೆದು ಪ್ರಚಾರ ಮಾಡುವು ದಕ್ಕೆ ಸಾಕಷ್ಟು ಪತ್ರಿಕೆಗಳು ಸ್ಪರ್ಧಿಸಿದವು. ನಂಬಿನಾರಾಯಣನ್‍ರನ್ನು ವಿಲನ್ ಆಗಿಸಿ ಹಲವು ಕತೆ ಕಟ್ಟಲಾಯಿತು. ನಂಬಿನಾರಾಯಣನ್ ಮೊದಲು ಪೊಲೀಸ್ ಕಸ್ಟಡಿಗೆ ಬಳಿಕ ಜೈಲುಪಾಲಾದರು.

ಅಮಾಯಕ ಮತ್ತು ನಾಡಿನ ಪ್ರಮುಖ ವಿಜ್ಞಾನಿಗೆ ಇಂಥ ಅವಸ್ಥೆ ಬಂದರೆ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಇಸ್ರೋದಂತಹ ಸಂಸ್ಥೆಯಲ್ಲಿ ಪ್ರಮುಖ ವಿಜ್ಞಾನಿಗಳೇ ದೇಶಕ್ಕೆ ದ್ರೋಹ ಎಸಗುತ್ತಾರೆಂದು ಸೀರಿಯಲ್ ಸೀರಿಯಲ್ ಕತೆಗಳು ಸೃಷ್ಟಿಸಲ್ಪಟ್ಟಿತು. ಒಂದೆಡೆ ಇಸ್ರೋದಂತಹ ಪ್ರಭಾವಿ ಸಂಸ್ಥೆಗೆ ಅವಮಾನ. ಇನ್ನೊಂದೆಡೆ ವಿಜ್ಞಾನಿಗಳ ಬಗ್ಗೆಯೇ ಸಂದೇಹದಿಂದ ನೋಡುವ ಸ್ಥಿತಿ. ಇಂದು ಸುಳ್ಳು ಎಂದು ಸಾಬೀತಾದ ಕತೆ ಯನ್ನು ಅಂದು ಸ್ವಲ್ಪವೂ ದೇಶದ ಮಾನದ ಪ್ರಜ್ಞೆಯಿಲ್ಲದೆ ರಚಿಸಲಾಗಿತ್ತು ಎಂದು ಯೋಚಿಸಿ ದಾಗ ಅವರೆಷ್ಟು ನಿಕೃಷ್ಟರು, ಆ ಕಥೆ ಬ ರೆದವರು, ಹೆಣೆದವರು, ಅದರ ಹಿಂದೆ ತನಿಖೆ ನಾಟಕ ಮಾಡಿಸಿದವರು ಎನ್ನುವುದು ಅರ್ಥವಾಗಿ ಬಿಡುತ್ತದೆ.
ಅಂದು ಕತೆ ನಡೆಯುವಾಗ ಕೆ. ಕರುಣಾಕರನ್ ಕೇರಳ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಬೇಹುಗಾರಿಕಾ ಪ್ರಕರಣವು ವಿವಿಧ ಕ್ಷೇತ್ರದಲ್ಲಿನ ಹಲವರ ಸಾಮೂಹಿಕ ಸ್ವಾರ್ಥದ ಸೃಷ್ಟಿಯಾಗಿತ್ತು ಎನ್ನಲಡ್ಡಿಯಿಲ್ಲ. ಅಂದಿನ ವಿವಿಧ ರಾಜಕೀಯ ಸಂಘಟನೆಗಳು, ಅಧಿಕಾರಿಗಳು ಕೆಲವು ಪತ್ರಿಕೆಗೆಳು ಆ ಸ್ವಾರ್ಥಿಗಳಾಗಿದ್ದರು.

ಮರಿಯಂ ರಶೀದ್‍ರ ಬಂಧನದೊಂದಿಗೆ ಆರಂಭವಾದ ಕತೆ ಫೌಝಿಯಾ ಹಸನ್ ಎನ್ನುವ ಇನ್ನೋರ್ವ ನಟಿಯನ್ನು ಬಂಧಿಸಲಾಗಿದೆ ಎನ್ನುವ ಲ್ಲಿಗೆ ತಿರುವು ಪಡೆದುಕೊಂಡಿತು. ಇದು ಪತ್ರಿಕೆಗಳಲ್ಲಿ ರುವ ಹಲವರು ಸತ್ಯವಿರಬಹುದು ಎನ್ನುವ ನಿರ್ಧಾ ರಕ್ಕೆ ಬರುವಂತೆ ಮಾಡಿತು. ಹೀಗೆ ಬೇಹುಗಾರಿಕೆಯ ಕತೆ ಹಿಗ್ಗುತ್ತಾ ಹೋಯಿತು. ಆದರೆ, ಈಗ ನಂಬಿ ನಾರಾಯಣನ್ ವಿಲನ್ ಎಂದು ಚಿತ್ರಿಸಿದ ಈ ಎಲ್ಲ ಮಂದಿ ಪಾಪ ಪ್ರಜ್ಞೆಯಿಂದ ನರಳುವುದನ್ನಲ್ಲದೆ ಬೇರೇನೂ ಮಾಡುವಂತಿಲ್ಲ.
ಪೊಲೀಸರ ವೈಯಕ್ತಿಕ ಆಸಕ್ತಿಯಲ್ಲಿ ಪ್ರಕರಣ ವಿವಿಧ ಕಡೆಗಳಲ್ಲಿ ಶರವೇಗದಲ್ಲಿ ಹರಡಿಕೊಂಡಿತು. ಸರಕಾರ ಮತ್ತು ರಾಜಕೀಯದ ಕೆಲವು ಉದ್ದೇಶ ಗಳು ಇದರಲ್ಲಿ ಪ್ರಕಟವಾಗುವುದರೊಂದಿಗೆ ಕತೆ ಹೆಚ್ಚಿನ ಹೊರಳಿಕೆ ಮತ್ತು ಅರ್ಥವನ್ನು ಪಡೆದು ಕೊಂಡಿತು. ಇಸ್ರೋದೊಳಗೆ ನಂಬಿನಾರಾಯಣನ್ ಕುರಿತು ವಿವಾದ ಎದ್ದಿತು. ನಂಬಿನಾರಾಯಣನ್ ಇಸ್ರೋಕ್ಕೆ ರಾಜೀನಾಮೆ ನೀಡಿದರು. ಇಸ್ರೋದಲ್ಲಿ ಕ್ರಯೋಜನಿಕ್ ತಂತ್ರಜ್ಞಾನ ವಿಕಾಸಗೊಳಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ಅವರು ಇಟ್ಟುಕೊಂಡಿದ್ದರು. ಈ ತಂತ್ರಜ್ಞಾನ ಜಿಎಸ್‍ಎಲ್‍ವಿ ರಾಕೆಟ್‍ನ ಹೃದಯವಾಗಿದೆ. ಅಂದು ಭಾರತವು ವಿದೇಶದಿಂದ ಉಪಗ್ರಹಗಳನ್ನು ಹಾರಿಸುತ್ತಿತ್ತು. ದೇಶಕ್ಕೆ ದೊಡ್ಡ ವೆಚ್ಚ ಆಗದಂತೆ ನೋಡಿಕೊಳ್ಳಲು ಸ್ವಾತಂತ್ರವಾಗಿ ಜಿಎಸ್‍ವಿಯಂತಹ ದೊಡ್ಡ ಉಡಾವಣಾ ವಾಹನ ವನ್ನು ದೇಶದಲ್ಲಿಯೇ ನಿರ್ಮಿಸುವ ಎಂದು ಬಯಸಿದ ವಿಜ್ಞಾನಿಗಳಲ್ಲಿ ನಂಬಿನಾರಾಯಣನ್ ಒಬ್ಬರು. ಆದರೆ ಉಪಗ್ರಹ ವನ್ನು ವಿದೇಶದಿಂದ ಹಾರಿಸೋಣ, ಉಪಗ್ರಹ ನಿರ್ಮಿಸುವತ್ತ ಗಮನ ಹರಿಸೋಣ ಎಂದು ಇನ್ನೊಂದು ಗುಂಪು ವಾದಿಸಿತು. ಇದಕ್ಕೆ ಸಂಬಂಧಿಸಿದ ತರ್ಕ ವಿವಾದಗಳಲ್ಲಿ ಕೆಲವು ಬಹಿರಂಗಗೊಂಡಿದ್ದವು. ವಿದೇಶದಲ್ಲಿ ಉಪಗ್ರಹ ಹಾರಿಸಿದರೆ ಭಾರೀ ದೊಡ್ಡ ಮೊತ್ತದ ಕಮಿಶನ್ ಸಿಗುತ್ತದೆ ಎನ್ನುವುದು ಅದರಲ್ಲೊಂದು ಆರೋಪವಾಗಿದೆ. ಆದ್ದರಿಂದ ರಷ್ಯದ ಕ್ರಯೋಜನಿಕ್ ತಂತ್ರಜ್ಞಾನ ಈ ಕಾರಣದಿಂದ ನಿರಾಕರಿಸಲ್ಪಟ್ಟಿತು. ಇದರಲ್ಲಿಯೂ ಲಾಬಿಗಳು ಕೆಲಸ ಮಾಡಿವೆ ಎಂದು ಹೇಳಲಾಗಿತ್ತು. ದೇಶದಲ್ಲಿ ಇದನ್ನು ವಿಕಾಸಗೊಳಿಸಿ ಪರೀಕ್ಷಿಸಿದ ಕಾಲದಲ್ಲಿಯೇ ಬೇಹುಗಾರಿ ಪ್ರಕರಣ ತಲೆಎತ್ತಿದ್ದು ಎನ್ನುವುದು ಹೆಚ್ಚು ಗಮನಾರ್ಹವಾಗಿದೆ.

ರಮಣ್ ಶ್ರೀವಾಸ್ತವ ಎನ್ನುವ ಪೊಲೀಸ್ ಅಧಿಕಾರಿ, ಗೃಹ ಇಲಾಖೆಯ ಹೊಣೆಯಿದ್ದ ಮುಖ್ಯಮಂತ್ರಿ ಕರುಣಾಕರನ್‍ರಿಗೆ ಹೆಚ್ಚು ನಿಕಟರೆಂದು ಪೊಲೀಸರಲ್ಲಿ ಕೆಲವು ಪ್ರಮುಖರು ಭಾವಿಸುತ್ತಿದ್ದರು. ಪಾಲಕ್ಕಾಡಿನಲ್ಲಿ ಸಿರಾಜುನ್ನೀಸಾ ಎನ್ನುವ ಬಾಲಕಿ ಪೊಲೀಸರ ಗುಂಡಿಗೆ ಬಲಿ ಯಾದ ಕಾಲವದು. ಆದ್ದರಿಂದ ಶ್ರೀವಾಸ್ತವರ ಬಗ್ಗೆ ಜನರಲ್ಲಿಯೂ ಒಳ್ಳೆಯ ಅಭಿಪ್ರಾಯ ಇರ ಲಿಲ್ಲ. ಸರಕಾರದ ಭಾಗವಾದ ಯುಡಿಎಫ್‍ನಲಿಯೇ ಶ್ರೀವಾಸ್ತವರ ಬಗ್ಗೆ ವಿರೋಧ ಇತ್ತು. ಪೊಲೀಸರು ಬಂಧಿಸಿದ ಮರಿಯಂ ರಷೀದಾ, ಫೌಝಿಯಾ ಹಸನ್‍ರೊಂದಿಗೆ ಶ್ರೀವಾಸ್ತವರನ್ನು ಜೋಡಿಸಿ ಕತೆಗಳು ಬಂದವು. ಬೆಂಗಳೂರಿನಲ್ಲಿ ಮರಿಯಂ ರನ್ನು ಶ್ರೀವಾಸ್ತವ ಭೇಟಿಯಾಗಿದ್ದಾರೆ ಎನ್ನುವ ಪ್ರಚಾರ ನಡೆಯಿತು. ರಶೀದಾ ಬೇಹುಗಾರಿಕಾ ಕನ್ಯೆಯಾಗಿ ಚಿತ್ರೀಕರಿಸಲ್ಪಟ್ಟರು. ಕಥೆಗಳಿಂದಾಗಿ ಪೌಝಿಯ ಮತ್ತು ಮರಿಯಂ ರಶೀದಾರಿಗೆ ಪೊಲೀಸರಿಂದ ಮಾನಸಿಕ, ದೈಹಿಕ ದೌರ್ಜನ್ಯ ನಡೆಯಿತು. ಅದರಂತೆ ನಂಬಿನಾರಾಯಣನ್ ಮತ್ತು ಚಂದ್ರಶೇಖರ್ ಕೂಡ ದೌರ್ಜನ್ಯಕ್ಕೆ ಗುರಿ ಯಾದರು. ರಮಣ್ ಶ್ರೀವಾಸ್ತವ ಪೊಲೀಸ್ ಇಲಾಖೆಯಲ್ಲಿಯೇ ಒಂಟಿಯಾದರು. ಅವರು ಹೋಗುತ್ತಿದ್ದ ಕಾರಿಗೆ ಜನರು ಕಲ್ಲೆಸೆಯ ತೊಡಗಿ ದರು. ಆರೋಪ ಹೊರಿಸಲಾದವರಲ್ಲಿ ಹಲವರು ಬಹಿರಂಗವಾಗಿ ಹೊರಗೆ ಬರಲಾರದಂತಹ ಸ್ಥಿತಿ ನಿರ್ಮಾಣವಾಯಿತು. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದ ಸ್ಥಿತಿ ನಿರ್ಮಾಣವಾಯಿತು. ಹಲವರು ರಜೆಹಾಕಿ ಬೇರೆಡೆಗೆ ಹೋದರು.
ರಮಣ್ ಶ್ರೀವಾಸ್ತವರ ಕುರಿತು ಮುಖ್ಯಮಂತ್ರಿ ಕರುಣಾಕರನ್‍ರಿಗಿದ್ದ ನಿಕಟತೆ ಕೇರಳದ ಕಾಂಗ್ರೆಸ್ಸಿ ನದ್ದೇ ಇನ್ನೊಂದು ಬಣದ ವಿರೋಧಕ್ಕೆ ಕಾರಣವಾಗಿತ್ತು. ಕರುಣಾಕರನ್‍ರನ್ನು ಅಣಗಿಸುವುದ ಕ್ಕಾಗಿ ಈ ಕತೆಯನ್ನು ಅವರು ಬಳಸಿಕೊಂಡರು. ಶ್ರೀವಾಸ್ತವರ ವಿರುದ್ಧ ಆರೋಪ ಕೇಳಿ ಬಂದಾಗ ಕರುಣಾಕರನ್ ಶ್ರೀವಾಸ್ತವರನ್ನು ಬೆಂಬಲಿಸಿದರು. ಇದೇ ವೇಳೆ ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಈ ಪ್ರಕರಣದಲ್ಲಿ ಹೆಚ್ಚು ಆಸಕ್ತಿ ವಹಿಸಿದರು. ಅಲ್ಲಿವರೆಗೆ ಇಂಟಲಿಜೆನ್ಸ್ ವಿಭಾಗ ಕೇಸು ತನಿಖಿ ಸುತ್ತಿತ್ತು. ನಂತರ ಅದು ಸಿಬಿಐಗೆ ವರ್ಗಾಯಿ ಸಲ್ಪಟ್ಟಿತು. ಭಿನ್ನಮತೀಯರ ಕೈಮೇಲಾಯಿತು. ನರಸಿಂಹರಾವ್ ಕರುಣಾಕರನ್ ರಾಜೀನಾಮೆ ಕೊಡಿಸಿ ಎಕೆ ಆ್ಯಂಟನಿಯನ್ನು ಮುಖ್ಯಮಂತ್ರಿ ಮಾಡಿದರು. ಇಂತಹ ಬದಲಾ ವಣೆಗೆ ಆ್ಯಂಟನಿ ಸಮ್ಮತಿಸಿರದಿದ್ದರೂ ಭಿನ್ನಮತೀ ಯರ ಒತ್ತಡಕ್ಕೆ ಮಣಿದು ಅವರು ಮುಖ್ಯಮಂತ್ರಿಯಾದರು. ಹೀಗೆ ಯಾವುದೋ ಒಂದು ಸಾಧನೆಗಾಗಿ ರಾಜಕೀಯ ವೈಯಕ್ತಿಕ ಸೇಡು ತೀರಿಸಲಿಕ್ಕಾಗಿ ನಂಬಿನಾರಾಯಣನ್, ಚಂದ್ರಶೇಖರ್ ಮತ್ತು ಕರುಣಾಕರನ್‍ರಂತಹ ಪ್ರಮುಖರು ಸುಮ್ಮನೆ ಬಲಿಯಾಗ ಬೇಕಾಯಿತು. ಕರಣಾಕರನ್ ಈಗಿಲ್ಲ. ಆದರೆ ನಂಬಿನಾರಾಯಣನ್ ಸುಳ್ಳು ಕತೆಗಳನ್ನು ಮಣಿಸಿ ಕತೆಹೆಣದವರೇ ಅವರಿಗೆ ಮಾನನಷ್ಟ ಕೊಡಬೇಕೆಂದು ಸುಪ್ರೀಮ್ ತೀರ್ಪು ನೀಡಿದೆ. ಕೇರಳ ಸರಕಾರ ನಂಬಿನಾರಾಯಣ್‍ನರ 22 ವರ್ಷಗಳ ಹೋರಾಟದಲ್ಲಿ ಕೊನೆಗೂ ಐವತ್ತು ಲಕ್ಷ ಕಳಕೊಂಡಿದೆ. ಜತೆಗೆ ಸುಳ್ಳು ಕತೆಕಟ್ಟಿ ಯಾರೆಲ್ಲರ ಭವಿಷ್ಯವನ್ನು ಕೆಡಹುವ ಧೂರ್ತರಿಗೆ ಇದು ಪಾಠವಾಗಬೇಕಾದರೆ ಈ ಕತೆ ಎಲ್ಲಿಂದ ಹೇಗೆ ಸೃಷ್ಟಿಯಾಯಿತು ಎಂದು ತನಿ ಖೆಯಾಗ ಬೇಕು; ತಪ್ಪಿತಸ್ಥರು ಜೈಲಿನ ಕಂಬಿ ಎಣಿಸಬೇಕು. ನಂಬಿನಾರಾಣನ್‍ರ ಗೆಲುವು ಇವರೆಲ್ಲರಿಗೂ ಖಂಡಿತಾ ಎಚ್ಚರಿಕೆ ಕರಗಂಟೆಯಾಗಿದೆ ಎಂದು ಸದ್ಯ ಹೇಳಬಹುದು.