ತೆಲಂಗಾಣ: 70 ಲಕ್ಷ ನಕಲಿ ಮತದಾರರು, 21,000 ಮತದಾರರ ವಯಸ್ಸು 100 – 2017 !

0
728

ಹೈದರಾಬಾದ್: ಭಾರತೀಯ ಚುನಾವಣಾ ಆಯೋಗವು ತೆಲಂಗಾಣದಲ್ಲಿ ಬಿಡುಗಡೆಗೊಳಿಸಿದ ಮತದಾರರ ಪಟ್ಟಿಯಲ್ಲಿ 21,000 ಮತದಾರರ ವಯಸ್ಸು 100 ರಿಂದ 2017 ಎಂದು ನಮೂದಿಸಲ್ಪಟ್ಟಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಎಐಸಿಸಿಯ ಕಾರ್ಯದರ್ಶಿಯಾದ ಅಭಿಷೇಕ್ ಮನು ಸಿಂಘ್ವೀಯವರು ದೆಹಲಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಸಕಲ ದಾಖಲೆಗಳನ್ನು ಬಿಚ್ಚಿಟ್ಟರು.
ಕೇಂದ್ರ ಸರಕಾರ, ರಾಜ್ಯಸರಕಾರ ಹಾಗೂ ಚುನಾವಣಾ ಆಯೋಗವನ್ನು ದೂಷಿಸಿದ ಸಿಂಘ್ವೀ, ಸರಿಸುಮಾರು 70 ಲಕ್ಷ ನಕಲಿ ಮತದಾರರು ಮತದಾರರ ಪಟ್ಟಿಯಲ್ಲಿರುವುದನ್ನು ತಿಳಿಸಿದರು.

ರಾಜಸ್ಥಾನ, ಮಹಾರಾಷ್ಟ್ರ ಮತ್ತು ಛತ್ತೀಸ್ಗಢಗಳಂತೆಯೇ ತೆಲಂಗಾಣದಲ್ಲಿಯೂ ಕೂಡ 70 ಲಕ್ಷ ನಕಲಿ ಮತದಾರರರಿದ್ದು ಈ ಪಟ್ಟಿಯಲ್ಲಿ ಹೆಸರುಗಳು ಇರುವ ಅಥವಾ ಹೆಸರಿಲ್ಲದಿರುವ ಮತದಾರರಿರುವುದಾಗಿ ಆರೋಪಿಸಿದ್ದಾರೆ. ಈ ಕುರಿತು ಖಾಸಗಿ ಅನ್ವೇಷಣೆಗಳನ್ನು ನಡೆಸಿರುವುದಾಗಿ ತಿಳಿಸಿದ ಸಿಂಘ್ವೀ; ಅಧಿಕಾರಿಗಳು ನಡೆಸುತ್ತಿರುವ ದ್ರೋಹದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

50 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳು ಮತದಾರರ ಪಟ್ಟಿಯಾದ್ಯಂತ ಪುನರ್ ಉಲ್ಲೇಖಿಸಲ್ಪಟ್ಟಿವೆ. ಅಷ್ಟೇ ಅಲ್ಲದೇ ಹೆಸರು, ವಿಳಾಸ, ವಯಸ್ಸು ಮತ್ತು ಭಾವಚಿತ್ರಗಳೂ ಕೂಡ ಒಂದೇ ತೆರನಾಗಿವೆ. ಇದಲ್ಲದೇ ಆಂದ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಹಂಚಿಕೆಯಾದ 9 ಮಂಡಲಗಳಲ್ಲಿಯೂ ಸರಿಸುಮಾರು 17 ಲಕ್ಷ ಮತದಾರರ ನಕಲಿ ಪ್ರತಿಗಳಿವೆ. ಚುನಾವಣಾ ಆಯೋಗವು ಈ ಹದಿನೇಳು ಲಕ್ಷ ಮತದಾರರನ್ನು ಎರಡೂ ರಾಜ್ಯಗಳು ಹೊಂದಿವೆ ಎಂದಿರುವುದು ಹಾಸ್ಯಾಸ್ಪದವಾಗಿದೆ.ಹಾಗಾದರೆ ಈ ಹದಿನೇಳು ಲಕ್ಷ ಜನರು ಎರಡೂ ರಾಜ್ಯಗಳಿಗೆ ಸೇರಿದವರೇ ಅಥವಾ ಹದಿನೇಳು ಲಕ್ಷ ಜನರಿಗೆ ಎರಡೂ ರಾಜ್ಯಗಳಲ್ಲಿ ಮತದಾನದ ಹಕ್ಕು ನೀಡಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಕುರಿತು ಮುಖ್ಯ ಚುನಾವಣಾಧಿಕಾರಿಗಳ ಬಳಿ ಸೆಪ್ಟಂಬರ್ 14 ರಂದು ವಿಚಾರಿಸಿದಾಗ ಮತದಾರರ ಪಟ್ಟಿಯಲ್ಲಿ ತಪ್ಪುಗಳಿರುವುದು ಗಮನಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರಲ್ಲದೇ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ದೀರ್ಘಾವಧಿ ತೆಗೆದುಕೊಳ್ಳುವುದೆಂದು ಹೇಳಿಕೆ ನೀಡಿದ್ದಾರೆ. ಆದರೆ ಮತದಾರರ ಪಟ್ಟಿಯನ್ನು ಶೀಘ್ರವಾಗಿ ಪರಿಷ್ಕರಿಸ ಬೇಕಿರುವಾಗ ದೀರ್ಘಾವದಿ ಸಮಯವೇಕೆ ಬೇಕು? ಎಂದು ಟಿಪಿಸಿಸಿಯ ಅಧ್ಯಕ್ಷರಾದ ಮರ್ರೀ ಶಶಿಧರ್ ರೆಡ್ಡಿ ಹೇಳಿದ್ದಾರೆ.