ಸನ್ಮಾರ್ಗ ವಾರ್ತೆ
ಮಲಪ್ಪುರಂ: ಬಕ್ರೀದ್ಗೆ ಸಂಬಂಧಿಸಿ ಧರ್ಮ ದ್ವೇಷಕ್ಕೆ ಕಾರಣ ವಾಗುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದ ಬ್ಯಾಂಕ್ ನೌಕರರನ್ನು ಕೇರಳದಲ್ಲಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಸತ್ಯನ್(41) ಎಂದು ಗುರುತಿಸಲಾಗಿದೆ.
ಬಕ್ರೀದ್ ದಿನದಂದು ಸತ್ಯನ್ ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ. ಇದರ ವಿರುದ್ಧ ಯುಡಿಎಫ್ ನಾಯಕ ಮತ್ತು ಯುವಜನ ಸಂಘವು ದೂರು ದಾಖಲಿಸಿತ್ತು. ಇದರ ಬೆನ್ನಲ್ಲೇ ಸಿಪಿಎಂ ಬ್ರಾಂಚ್ ಕಮಿಟಿಯ ಸದಸ್ಯನಾಗಿದ್ದ ಈತನನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಮಲಪ್ಪುರಂ ಜಿಲ್ಲಾ ಸಹಕಾರಿ ಬ್ಯಾಂಕ್ನ ಮೇಲಾ ಟೂರ್ ಶಾಖೆಯ ಜೂನಿಯರ್ ಅಕೌಂಟೆಂಟ್ ಆಗಿದ್ದ ಈತನನ್ನು ಪೋಸ್ಟ್ ಹಾಕಿದ ಮರುದಿವಸವೇ ಉದ್ಯೋಗದಿಂದ ಅಮಾನತು ಮಾಡಲಾಗಿದೆ.












