ಜೆಎನ್‍ಯು ದಾಳಿ: ಉಪಕುಲಪತಿಯ ವಿರುದ್ಧ ಗೃಹ ಇಲಾಖೆಯ ಸಮಿತಿಯಿಂದ ವರದಿ

0
463

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ. 9: ಜೆಎನ್‍ಯು ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿರುದ್ಧ ದಾಳಿ ನಡೆದ ಘಟನೆಯಲ್ಲಿ ಉಪಕುಲಪತಿಯ ವಿರುದ್ಧ ಗೃಹ ಇಲಾಖೆಯ ಸಮಿತಿಯು ವರದಿ ನೀಡಿದೆ ಎಂದು ವರದಿಯಾಗಿದೆ. ವರದಿಯು ಉಪಕುಲಪತಿ ಎಂ. ಜಗದೀಶ್ ಕುಮಾರ್ ರನ್ನು ಆರೋಪಿಯನ್ನಾಗಿ ಹೆಸರಿಸಿದೆ. ಮಧ್ಯಾಹ್ನ ಎರಡು ಗಂಟೆಯಿಂದ ಕ್ಯಾಂಪಸ್‍ನಲ್ಲಿ ದಾಳಿ ನಡೆದರೂ ಪೊಲೀಸರಿಗೆ ತಿಳಿಸಲಿಲ್ಲ. ಸಂಜೆ ಆರೂವರೆ ಗಂಟೆಗೆ ವಾಟ್ಸಪ್ ಸಂದೇಶದ ಮೂಲಕ ಯುನಿವರ್ಸಿಟಿಯ ಗೇಟಿನ ಹೊರಗೆ ಸುರಕ್ಷೆ ಒದಗಿಸಲು ಡಿಸಿಪಿಗೆ ಆಗ್ರಹಿಸಿದರು ಎಂದು ಗೃಹ ಸಚಿವಾಲಯದ ಸಮಿತಿಯು ವರದಿಯಲ್ಲಿ ತಿಳಿಸಲಾಗಿದೆ.

ಇದೇವೇಳೇ, ವಿಸಿಯನ್ನು ವಜಾಗೊಳಿಸಿ, ದುಷ್ಕರ್ಮಿಗಳನ್ನು ಬಂಧಿಸಿ , ಹಾಸ್ಟೆಲ್ ಶುಲ್ಕ ಹೆಚ್ಚಳ ಹಿಂಪಡೆಯಿರಿ ಇತ್ಯಾದಿ ಬೇಡಿಕೆಯೊಂದಿಗೆ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಈ ವಿಷಯವನ್ನು ಮುಂದಿಟ್ಟು ಇಂದು ಮಾನವ ಸಂಪನ್ಮೂಲ ಸಚಿವಾಲಯಕ್ಕೆವಿದ್ಯಾರ್ಥಿಗಳು ಜಾಥಾ ತೆರಳುತ್ತಿದ್ದಾರೆ. ಜೆಎನ್‍ಯು ಅಧ್ಯಾಪಕ ವೃಂದವೂ ವಿದ್ಯಾರ್ಥಿಗಳಿಗೆ ಬೆಂಬಲ ಘೊಷಿಸಿವೆ.