ಸನ್ಮಾರ್ಗ ವಾರ್ತೆ
ತಿರುವನಂತಪುರಂ ,ಜ. 28: ಭಾರತವನ್ನು ಧಾರ್ಮಿಕ ದೇಶವನ್ನಾಗಿ ಮಾಡಲು ಯತ್ನಿಸುವ ಆರೆಸ್ಸೆಸ್ ಮತ್ತು ಕೇಂದ್ರ ಸರಕಾರದ ಕ್ರಮಗಳನ್ನು ರಾಜಕೀಯ, ಜಾತಿಮತ ವ್ಯತ್ಯಾಸ ಮರೆತು ಒಗ್ಗಟ್ಟಿನ ಹೋರಾಟದ ಮೂಲಕ ವಿಫಲಗೊಳಿಸಬೇಕಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎ ಕೆ ಆಂಟನಿ ಹೇಳಿದರು. ಸಾಂಸ್ಕøತಿಕ ಸಾಹಿತಿ ಮುಂದಾಳುತ್ವದಲ್ಲಿ ಆರ್ಯಾಡನ್ ಶೌಕತ್ ನೇತೃತ್ವದ ಕಾವಲು ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಅನೇಕತೆಯಲ್ಲಿ ಏಕತೆಯೊಂದಿಗೆ ಭಾರತದ ಅಸ್ತಿತ್ವ ಉಳಿಯಬೇಕಾದರೆ ಆರೆಸ್ಸೆಸ್, ಮೋದಿಯನ್ನು ನಿಯಂತ್ರಿಸಲೇ ಬೇಕಾಗಿದೆ. ಮೋದಿ ಎರಡನೆ ಬಾರಿ ಅಧಿಕಾರಕ್ಕೆ ಬರುವುದ ರೊಂದಿಗೆ ಅವರ ಯೋಜನೆಗಳು ಒಂದೊಂದಾಗಿ ಹೊರಬರತೊಡಗಿದೆ. ಸಂವಿಧಾನವನ್ನು ನಾಶಪಡಿಸುವ ಆರೆಸ್ಸೆಸ್ ಕ್ರಮಗಳನ್ನು ವಿಫಲಗೊಳಿಸದಿದ್ದರೆ ನಾವು ಇನ್ನೂ ದುಃಖಿಸಬೇಕಾಗಬಹುದು.
ರಾಜನಿಂಗಿಂತಲೂ ದೊಡ್ಡ ರಾಜಭಕ್ತಿಯನ್ನು ಅಮಿತ್ಶಾರೊಂದಿಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ತೋರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಆರೋಪಿಸಿದರು. ಗಾಂದಿಪಾರ್ಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮುಂತಾದವರು ಮಾತಾಡಿದರು.












