ರಿಯಾಝ್ ಅಶ್ರಫ್ ಕಲಾಕಾರ್ ನಿಧನ

0
170

ಸನ್ಮಾರ್ಗ ವಾರ್ತೆ

ಮಂಗಳೂರು: ಹಲವು ಪ್ರತಿಭೆಗಳ ಆಗರ ಕಾಟಿಪಳ್ಳದ ನಿವಾಸಿ ರಿಯಾಝ್ ಅಶ್ರಫ್ ಕಲಾಕಾರ್ ಫೆ.4 ಮಧ್ಯಾಹ್ನ ನಿಧನರಾದರು. ಜನವರಿ 24ರಂದು ತೀವ್ರ ಹೃದಯಾಘಾತಕ್ಕೊಳಗಾಗಿ ಪ್ರಜ್ಞಾಹೀನರಾಗಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಕಳೆದ ಹದಿನೈದು ದಿನಗಳಿಂದ ಜೀವನ್ಮರಣ ಹೋರಾಟದಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು.