ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: 2019ರ ಜಾಮಿಆದ ಘರ್ಷಣೆ ಪ್ರಕರಣದಲ್ಲಿ ಜೆಎನ್‍ಯು ಸಂಶೋಧಕ ವಿದ್ಯಾರ್ಥಿ ಆಕ್ಟಿವಿಸ್ಟ್ ಶಾರ್ಜಿಲ್ ಇಮಾಮ್‍ರನ್ನು ದಿಲ್ಲಿ ಸಾಕೇತ್ ಕೋರ್ಟು ಖುಲಾಸೆ ಗೊಳಿಸಿದೆ. ಇನ್ನೊಬ್ಬರ ಆರೋಪಿ ಆಸಿಫ್ ತನ್ಹರನ್ನು ಕೋರ್ಟು ಈ ಹಿಂದೆ ಖುಲಾಸೆಗೊಳಿಸಿತ್ತು ನಾಗರಿಕ ತಿದ್ದುಪಡಿ ಕಾನೂನು ವಿರುದ್ಧ 2019 ಡಿಸೆಂಬರ್ 13ಕ್ಕೆ ಜಾಮಿಆ ಮಿಲ್ಲಿಯದಲ್ಲಿ ನಡೆದ ಪ್ರತಿಭಟನೆಯ ನಂತರ ಮೂರು ದಿವಸಗಳವರೆಗೆ ಘರ್ಷಣೆ ಪರಿಸ್ಥಿತಿ ತಲೆದೋರಿತ್ತು. ಈ ಪ್ರಕರಣದಲ್ಲಿ ಕೋರ್ಟು ಶಾರ್ಜಿಲ್‍ರನ್ನು ಆರೋಪ ಮುಕ್ತಗೊಳಿಸಿದೆ.
ಜಾಮಿಅ ನಗರ ಪ್ರದೇಶದಲ್ಲಿ ಪ್ರತಿಭಟನೆ ಮಾಡಿದವರು ಸಾರ್ವಜನಿಕ, ಖಾಸಗಿ ವಾಹನಗಳಿಗೆ ಹಾನಿ ಮಾಡಿದ್ದಾರೆ, ವಾಹನ ಸಂಚಾರಕ್ಕೆ ಅಡಚಣೆ ತಂದಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗುತ್ತಿದೆ. 2019 ಡಿಸೆಂಬರ್ 13ಕ್ಕೆ ಶಾರ್ಜಿಲ್ ಇಮಾಮ್‍ರು ಮಾಡಿದ ಭಾಷಣ ಈ ಹಿಂಸಾಚಾರಗಳಿಗೆ ಕಾರಣವೆಂದು ಪೊಲೀಸರು ಆರೋಪ ಹೊರಿಸಿದ್ದರು.
ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಡೆದ ಹೋರಾಟದ ವೇಳೆ ಮಾಡಿದ ಭಾಷಣದ ಮೇಲೆ ಹೊರಿಸಿದ್ದ ಯುಎಪಿಯ ಪ್ರಕರಣದಲ್ಲಿ ಶಾರ್ಜಿಲ್‍ರಿಗೆ ಈ ಹಿಂದೆಯೇ ಕೋರ್ಟು ಜಾಮೀನು ನೀಡಿತ್ತು. ಆದರೆ ಬೇರೆ ಪ್ರಕರಣಗಳು ಅವರ ಮೇಲೆ ಇರುವುದರಿಂದ ಅವರು ಜೈಲಿನಿಂದ ಹೊರಬರಲಾಗಿಲ್ಲ. ದಿಲ್ಲಿ ಗಲಭೆ ಪ್ರಕರಣದಲ್ಲಿ ಶಾರ್ಜಿಲ್ ವಿರುದ್ಧ ಪೊಲೀಸರು ಯುಎಪಿಎ ಪ್ರಕರಣ ದಾಖಲಿಸಿದ್ದರು. ಮಣಿಪುರ ,ಅಸ್ಸಾಮ್, ಅರುಣಾಚಲ ಪ್ರದೇಶಗಳಲ್ಲಿ ಹಲವು ಪ್ರಕರಣಗಳು ಶಾರ್ಜಿಲ್ ಇಮಾಮ್ ವಿರುದ್ಧ ದಾಖಲಿಸಲಾಗಿದೆ.