RSS ಪ್ರಕಾಶನ ಸಂಸ್ಥೆಯ ಮೇಲೆ ಶಾರ್ಜಾ ಪುಸ್ತಕ ಮೇಳದಲ್ಲಿ ದೂರು ದಾಖಲು

0
2099

ಶಾರ್ಜಾ: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್‍ದ (ಆರ್.ಎಸ್.ಎಸ್.) ಪ್ರಕಾಶನ ಸಂಸ್ಥೆಯಾಗಿರುವ ಕುರುಕ್ಷೇತ್ರ ಪ್ರಕಾಶನದ ವಿರುದ್ಧ ಜಗತ್ತಿನ ಅತೀ ದೊಡ್ಡ ಪುಸ್ತಕ ಮೇಳವಾದ ಶಾರ್ಜಾ ಪುಸ್ತಕ ಮೇಳದಲ್ಲಿ ದೂರು ದಾಖಲಾಗಿದೆ. ಸತ್ಯಧಾರ ಪ್ರಕಾಶನವು(Satyadhara Publications)) ಶಾರ್ಜಾ ಪುಸ್ತಕ ಮೇಳದ ಆಡಳಿತ ಮಂಡಳಿಯಲ್ಲಿ ಕುರುಕ್ಷೇತ್ರ ಪ್ರಕಾಶನದ ವಿರುದ್ಧ ದೂರು ಸಲ್ಲಿಸಿದ್ದು, ತನ್ನ ದೂರಿನಲ್ಲಿ ‘ಕುರುಕ್ಷೇತ್ರ ಪ್ರಕಾಶನವು ಮುಸ್ಲಿಮರ ವಿರುದ್ಧ ಮತ್ತು ಇಸ್ಲಾಮಿನಲ್ಲಿ ನಂಬಿಕೆ ಇರಿಸುವವರ ವಿರುದ್ಧ ಪ್ರಚೋದನಕಾರಿ ಸಂಸ್ಥೆಯಾಗಿ ಕಾರ್ಯನಿರತವಾಗಿದೆ’ ಎಂದಿದೆ.
ಮುಸ್ಲಿಮರ ವಿರುದ್ಧ ಮತ್ತು ಇಸ್ಲಾಮಿನ ವಿರುದ್ಧ ಧ್ವನಿ ಎತ್ತಿರುವ ಸಾವರ್ಕರ್‍ರ ನಿಲುವುಗಳನ್ನು ಒಳಗೊಂಡ ಪುಸ್ತಕಗಳನ್ನು ಹೆಚ್ಚಾಗಿ ಇದು ಪ್ರಕಾಶಿಸುತ್ತದೆ ಎಂದಿದೆ.
ಶಾರ್ಜಾ ಪುಸ್ತಕ ಮಳಿಗೆಯಲ್ಲಿ ಮೊದಲ ಬಾರಿಗೆ ಇಂತಹ ದೂರು ಬಂದಿರುವುದರ ಕುರಿತು ಯುಎಇಯ ಧಾರ್ಮಿಕ ಮತ್ತು ಸಾಂಸ್ಕøತಿಕ ಇಲಾಖೆಯು ತನಿಖೆಯನ್ನು ಆರಂಭಿಸಿದೆ.
ಈ ಕುರಿತು ನ್ಯಾಷನಲ್ ಹೆರಾಲ್ಡ್‍ನೊಂದಿಗೆ ಮಾತನಾಡಿದ ಕುರುಕ್ಷೇತ್ರದ ಪ್ರಕಾಶಕರಾದ ರಾಜೇಶ್ ಚಂದ್ರನ್‍ರವರು ಶಾರ್ಜಾ ಪುಸ್ತಕ ಮೇಳದಲ್ಲಿ ಎರಡು ವರ್ಷಗಳಿಂದ ತಮ್ಮ ಪುಸ್ತಕ ಮಳಿಗೆಯನ್ನು ನಡೆಸಲಾಗುತ್ತಿದ್ದು “ಆರ್‍ಎಸ್‍ಎಸ್‍ನ ರಾಜಕೀಯ ಮತ್ತು ಸೈದ್ಧಾಂತಿಕ ನಿಲುವುಗಳನ್ನು ಪ್ರಚುರ ಪಡಿಸಲಾಗುತ್ತಿದೆ. ನಮ್ಮ ಪುಸ್ತಕ ಮಳಿಗೆಯು ಇತರೆಲ್ಲ ಪುಸ್ತಕ ಮಳಿಗೆಗಳಿಗಿಂತ ಹೆಚ್ಚು ಪ್ರಚಲಿತವಾಗಿದೆ. ಧಾರ್ಮಿಕ ಮತ್ತು ರಾಷ್ಟ್ರ ಪ್ರೇಮವನ್ನೊಳಗೊಂಡ ಪುಸ್ತಕಗಳು ಇತರ ಯಾವುದೇ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಕೇರಳದ ಆರ್‍ಎಸ್‍ಎಸ್ ಮಳಿಗೆಯಾದ ಇಂದ್ರಪ್ರಸ್ಥ ಕೂಡಾ ಗೋಲ್ವಾಲ್ಕರ್, ಸಾವರ್ಕರ್ ಮತ್ತು ಹೆಡ್ಗೇವಾರ್‍ರವರ ಚಿಂತನೆಗಳನ್ನೊಳಗೊಂಡ ಪುಸ್ತಕಗಳನ್ನು ಮಾರಾಟ ಮಾಡುತ್ತಿರುವುದಾಗಿ ಪತ್ರಿಕಾ ಮೂಲಗಳು ತಿಳಿಸಿವೆ.