ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಆರೆಸ್ಸೆಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಖಂಡನೆ

0
264

ಸನ್ಮಾರ್ಗ ವಾರ್ತೆ

ವಾರಣಾಸಿ: ಹರಿದ್ವಾರದಲ್ಲಿ ಇತ್ತೀಚಿಗೆ ನಡೆದ ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ಮಾಡಲಾದ ದ್ವೇಷ ಭಾಷಣವನ್ನು ಆರೆಸ್ಸೆಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಖಂಡಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಪ್ರಚೋದನಕಾರಿ ಮತ್ತು ವಿಭಜಕ ಹೇಳಿಕೆಗಳನ್ನು ನೀಡುವ ಯಾರಿಗೂ ವಿನಾಯಿತಿ ನೀಡಬಾರದು ಮತ್ತು ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ದ್ವೇಷದ ರಾಜಕೀಯವನ್ನು ಭ್ರಷ್ಟಾಚಾರ ಎಂದು ಕರೆದಿದ್ದಾರೆ ಅಲ್ಲದೇ, ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅವರ ನಾಯಕರು ಸಮಾಜದ ಒಂದು ವರ್ಗವನ್ನು ಇನ್ನೊಂದರ ವಿರುದ್ಧ ಎತ್ತಿ ಕಟ್ಟುವುದನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ಇವರು ಆರೆಸ್ಸೆಸ್ ನ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರು ಕೂಡ ಆಗಿದ್ದಾರೆ.

ಯಾವುದೇ ರೀತಿಯ ದ್ವೇಷ ಭಾಷಣ ಖಂಡನೀಯ.ಎಲ್ಲಾ ದ್ವೇಷ ಭಾಷಣಗಳನ್ನು ಕಾನೂನಿನ ಪ್ರಕಾರ ಖಂಡಿಸಬೇಕು ಹಾಗೂ ಶಿಕ್ಷೆಗೆ ಗುರಿಪಡಿಸಬೇಕು.ಇದರಲ್ಲಿ ಯಾರಿಗೂ ವಿನಾಯಿತಿ ನೀಡಬಾರದು. ಹಿಂದುತ್ವವಾದಿಗಳು ಗಾಂಧಿಯನ್ನು ಕೊಂಡದ್ದು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರದ್ದು ಕೂಡ ಪ್ರಚೋದನಕಾರಿ ಭಾಷಣವಾಗಿದೆ ಎಂದು ಕೂಡ ಉತ್ತರಾಖಂಡದ ಹರಿದ್ವಾರದ ಧರ್ಮ ಸಂಸದ್ ನಲ್ಲಿ ಮಾಡಲಾದ ದ್ವೇಷ ಭಾಷಣಗಳ ಬಗ್ಗೆ ಅಭಿಪ್ರಾಯವನ್ನು ಕೇಳಿದಾಗ ಹೀಗೆ ಹೇಳಿದ್ದಾರೆ.