ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಈ ವರ್ಷದ GATE( Graduate Aptitude Test in Engineering-GATE) ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ಸುಪ್ರೀಂ ಕೋರ್ಟು ಹೇಳಿದೆ. ಕೊರೋನ ಮೂರನೇ ತರಂಗದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಬೇಕೆಂದು ಸಲ್ಲಿಸಿದ ಅರ್ಜಿಯಲ್ಲಿ ಈ ತೀರ್ಪು ನೀಡಿದ್ದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದರಿಂದ ಕಷ್ಟ ಮತ್ತು ಅನಿಶ್ಚಿತ ಪರಿಸ್ಥಿತಿ ಸಂಜಾತವಾಗುತ್ತದೆ ಎಂದು ಸುಪ್ರೀಂ ಕೋರ್ಟು ಅಭಿಪ್ರಾಯ ವ್ಯಕ್ತಪಡಿಸಿದೆ.
ಇಂಜಿನಿಯರಿಂಗ್ ಪ್ರವೇಶದ ಪ್ರಾಥಮಿಕ ಪರೀಕ್ಷೆ ಆಗಿದೆ. ಈ ತಿಂಗಳು ಐದು, ಆರು, ಹನ್ನೆರಡು, ಹದಿಮೂರನೇ ತಾರೀಕಿಗೆ ಪರೀಕ್ಷೆ ನಡೆಸಲು ನಿಶ್ಚಯಿಸಲಾಗಿದ್ದು, ಯಥಾ ಕ್ರಮ ನಡೆಯಲಿದೆ. ಮೂರನೇ ತರಂತ ತೀವ್ರವಾಗಿದೆ ಎಪ್ರಿಲ್ವರೆಗೆ ಮುಂದೂಡಿಕೆ ನಡೆಸಬೇಕೆಂದು ಹನ್ನೊಂದು ಅರ್ಜಿಗಳು ಸುಪ್ರೀಂ ಕೋರ್ಟಿನ ಮುಂದಿತ್ತು.
ಪರೀಕ್ಷೆ ಸರಕಾರದ ನೀತಿಯ ಪ್ರಕಾರದ ತೀರ್ಮಾನ ಇದರಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂದು ಜಸ್ಟಿಸ್ ಡಿ.ವೈ ಚಂದ್ರಚೂಡ್, ಅರ್ಜಿದಾರರಿಗೆ ತಿಳಿಸಿದರು. ಇದರಲ್ಲಿ ಕೋರ್ಟು ಮಧ್ಯಪ್ರವೇಶಿಸಿದರೆ ವಿದ್ಯಾರ್ಥಿಗಳಿಗೆ ಕಷ್ಟ ಆಗಲಿದೆ ಆದುದರಿಂದ ಅವರಲ್ಲಿ ಅನಿಶ್ಚಿತ ಭಾವನೆ ಉಂಟಾಗುತ್ತದೆ ಎಂದು ಕೋರ್ಟು ಹೇಳಿತು. ಕೊರೋನ ಮೂರನೇ ತರಂಗದಲ್ಲಿ ಎಲ್ಲವೂ ತೆರೆದುಕೊಂಡಿದೆ ಎಂದು ಕೋರ್ಟು ಹೇಳಿತು. ಲಕ್ಷಾಂತರ ಮಂದಿ ಗೇಟ್ ಪರೀಕ್ಷೆ ಬರೆಯಲಿದ್ದು, ಇದರಲ್ಲಿ 20,000 ಮಂದಿ ಮಾತ್ರ ಮುಂದೂಡಲು ಆನ್ಲೈನ್ ದೂರಿಗೆ ಸಹಿ ಹಾಕಿರುವುದನ್ನು ಕೂಡ ಕೋರ್ಟು ಬೆಟ್ಟು ಮಾಡಿತು.












