ಕೇಂದ್ರ ಸರಕಾರದಿಂದ ಗಾಂಧಿಪೀಡಿಯಾ ಸ್ಥಾಪನೆ: ನಿರ್ಮಲಾ ಸೀತಾರಾಮನ್

0
691

ನವದೆಹಲಿ, ಜು. 5 : ಗಾಂಧೀಜಿಯವರ ತತ್ವ, ಚಿಂತನೆಗಳ ಬಗ್ಗೆ ಯುವಜನತೆಯಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿಸುವುದಕ್ಕಾಗಿ ಅವರ 150 ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಗಾಂಧಿಪೀಡಿಯಾ ಸ್ಥಾಪನೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿ ಮಾತಾಡುತ್ತಿದ್ದರು. ಗಾಂಧಿಜೀಯವರ 150 ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದ್ದು, ಅದರ ಒಂದು ಭಾಗವಾಗಿ ಈ ಯೋಜನೆ ಇರಲಿದೆ ಎಂದವರು ಹೇಳಿದರು. ನ್ಯಾಷನಲ್​ ಕೌನ್ಸಿಲ್​ ಫಾರ್​ ಸೈನ್ಸ್​ ಮ್ಯೂಸಿಯಂನ ವತಿಯಿಂದ ಈ ಪ್ರಸ್ತಾವಿತ ‘ಗಾಂಧಿಪೀಡಿಯಾ’ ವನ್ನು ಸ್ಥಾಪಿಸಲಾಗುತ್ತದೆ.

ಜಗತ್ತಿನಾದ್ಯಂತದ ಪ್ರಮುಖ ಕಟ್ಟಡಗಳ ಮೇಲೆ ಗಾಂಧೀಜಿಯವರ ಚಿತ್ರವನ್ನು ಸ್ಥಾಪಿಸುವುದು ಮತ್ತು ಅವರಿಗೆ ಸಂಬಂಧಿಸಿದ ಸಿನಿಮಾ, ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸುವ ಯೋಜನೆಯು ಸರ್ಕಾರದ್ದಾಗಿದೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.