ಜಾಮಿಯ ಗುಂಡು ಹಾರಾಟ: ದುಷ್ಕರ್ಮಿಗೆ ಹಣ ಕೊಟ್ಟವರು ಯಾರು?- ರಾಹುಲ್ ಗಾಂಧಿ

0
721

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 31: ಪ್ರತಿಭಟನಾನಿರತ ಜಾಮಿಅ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಹಣ ಕೊಟ್ಟದ್ದು ಮತ್ತು ದುಷ್ಕರ್ಮಿಯನ್ನು ಕಳುಹಿಸಿದ್ದು ಯಾರು ಎಂದು ಕಾಂಗ್ರೆಸ್ ನಾಯ ರಾಹುಲ್ ಗಾಂಧಿ ಪ್ರಶ್ನಿಸಿದರು. ದುಷ್ಕರ್ಮಿ ಯಾವುದೇ ಸಂಘಟನೆಯಲ್ಲಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲು ಹಣ ಕೊಟ್ಟು ದುಷ್ಕರ್ಮಿಯನ್ನು ಕಳುಹಿಸಿದ್ದು ಯಾರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ರಾಮ್ ಭಕ್ತ್ ಗೋಪಾಲ್ ಎಂಬ ವ್ಯಕ್ತಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದನು. ಉತ್ತರ ಪ್ರದೇಶದವನಾದ ಈತ ಹನ್ನೊಂದನೆ ತರಗತಿ ವಿದ್ಯಾರ್ಥಿ ಎಂದು ಪೊಲೀಸರು ಹೇಳುತ್ತಿದ್ದಾರೆ. ದಿಲ್ಲಿ ಪೊಲೀಸರು ಹದಿನೇಳು ವರ್ಷದ ಈತನ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಿ ಜುವೈನಲ್ ಜಸ್ಟಿಸ್ ಬೋರ್ಡ್ ಮುಂದೆ ಹಾಜರುಪಡಿಸಿದ್ದಾರೆ. ಆಯುಧ ಕಾನೂನು ಪ್ರಕಾರ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ದುಷ್ಕರ್ಮಿ ಯಾವುದೇ ಸಂಘಟನೆಗೆ ಸಂಬಂಧಿಸಿದವನಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವ ಪೌರತ್ವ ಪತ್ರಿಭಟನೆ ಕಾರ್ಯಕ್ರಮಗಳನ್ನು ನೋಡಿದ ಬಳಿಕ ಆತ ಈ ಕೃತ್ಯವೆಸಗಿದನೆಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಈತ ಬಜರಂಗ ದಳ ಕಾರ್ಯಕರ್ತ ಎಂದು ವರದಿಗಳು ಬಹಿರಂಗವಾಗಿವೆ. ಈತ ಬಜರಂಗದಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.