ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಮಹಾರಾಷ್ಟ್ರ ಸಚಿವ ಎನ್ಸಿಪಿ ಮುಖಂಡ ನವಾಬ್ ಮಲಿಕ್ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೊ ಅಧಿಕಾರಿಯ ಕುರಿತು ಬಹಿರಂಗಪಡಿಸಿದ ಪತ್ರದ ಹೆಚ್ಚಿನ ವಿವರಗಳು ಹೊರಬಂದಿವೆ. ನಟ ಸುಶಾಂತ್ ಸಿಂಗ್ ರಾಜ್ಪೂತ್ ಸಾವಿನ ನಂತರ ಬಾಲಿವುಡ್ನಲ್ಲಿ ರಂಗಪ್ರವೇಶಿಸಿದ ಮಾದಕವಸ್ತು ಬೇಟೆಯನ್ನು ಕುರಿತ ವಿವರಗಳಿವೆ.
ಹೆಸರು ಹೇಳಲಿಚ್ಛಿಸದ ಎನ್ಸಿಬಿ ಅಧಿಕಾರಿ ಕಳುಹಿಸಿದ ಪತ್ರ ನಾಲ್ಕು ಪುಟ ಇದೆ. ಬಾಲಿವುಡ್ ತಾರೆಯರಿಂದ ಎನ್ಸಿಬಿ ಮುಂಬೈ ಝೋನಲ್ ಆಫಿಸರ್ ಸಮೀರ್ ವಾಂಖೆಡೆ ಹಣ ಕಬಳಿಸಿರುವುದಾಗಿ ಪತ್ರದಲ್ಲಿ ಆರೋಪಿಸಲಾಗಿದೆ.
ಸುಶಾಂತ್ ಪ್ರಕರಣದಲ್ಲಿ ಎನ್ಸಿಬಿಯ ಡೈರಕ್ಟರ್ ಜನರಲ್ ರಾಕೇಶ್ ಆಸ್ತಾನ, ಎಸ್ಐಟಿ ಹೊಣೆಯ ಕಮಲ್ ಪ್ರೀತ್ ಸಿಂಗ್ ಮಲ್ಹೋತ್ರರಿಗೆ ಹಸ್ತಾಂತರಿಸಿದ್ದರು. ಎನ್ಸಿಬಿ ಡೈರಕ್ಟರೇಟ್ ಆಫ್ ರವೆನ್ಯೂ ಇಂಟಲಿಜೆನ್ಸ್ನಿಂದ ವಾಂಖಡೆ ಝೋನಲ್ ಡೈರಕ್ಟರ್ ಆಗಿ ನೇಮಕಗೊಳಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶ ಪ್ರಕಾರ ವಾಂಖೆಡೆಗೆ ಎನ್ಸಿಬಿ ಝೋನಲ್ ಡೈರಕ್ಟರ್ ಆಗಿ ನೇಮಕಗೊಳಿಸಿದ್ದೆಂದು ಪತ್ರದಲ್ಲಿ ತಿಳಿಸಲಾಗಿದೆ.
ಇದರ ನಂತರ ಬಾಲಿವುಡ್ ತಾರೆಯರಿಗೆ ಸಂಬಂಧಿಸಿ ಮಾದಕವಸ್ತು ಕೇಸಿನ ತನಿಖೆ ಆಂಭವಾಗಿದ್ದು, ಹಣ ಕಬಳಿಸುವಿಕೆ ನಡೆದಿದೆ. ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ, ಕರೀಶ್ಮಾ ಪ್ರಕಾಶ್, ಶ್ರದ್ಧಾ ಕಪೂರ್, ಸಾರಾ ಅಲಿಖಾನ್, ರಾಕುಲ್ ಪ್ರೀತ್ ಸಿಂಗ್, ಭಾರತಿ ಸಿಂಗ್, ಹಶ್ ಲಿಂಬಾಚಿಯ, ರಿಯಾ ಚಕ್ರವರ್ತಿ, ಸೌವಿಕ್ ಚಕ್ರವರ್ತಿ, ಅರ್ಜುನ್ ರಾಂಪಾಲ್ರಿಂದ ಸಮೀರ್ ಹಣ ಪೀಕಿಸಿದ್ದಾರೆ. ಆಯಾಝ್ ಖಾನ್ ಎಂಬ ವಕೀಲನ ಮುಖಾಂತರ ಹಣ ಪೀಕಿಸಲಾಗಿದ್ದು, ಆಯಾಝ್ ಸಮೀರ್ ವಾಂಖೆಡೆಯ ಗೆಳೆಯ. ಈತ ಯಾವುದೇ ಅಡೆತಡೆರಹಿತವಾಗಿ ಎನ್ಸಿಬಿ ಕಚೇರಿಗೆ ಬರುತ್ತಿದ್ದ ಎಂದು ಪತ್ರದಲ್ಲಿ ಬರೆಯಲಾಗಿದೆ.
Here are the contents of the letter received by me from an unnamed NCB official.
As a responsible citizen I will be forwarding this letter to DG Narcotics requesting him to include this letter in the investigation being conducted on Sameer Wankhede pic.twitter.com/SOClI3ntAn— Nawab Malik نواب ملک नवाब मलिक (@nawabmalikncp) October 26, 2021












