ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು ನೂತನ ಶಂಕರಾಚಾರ್ಯರನ್ನಾಗಿ ಸ್ವೀಕರಿಸಲು ನಿರಾಕರಿಸಿದ ಸನ್ಯಾಸಿ ಅಖಾಡ

0
385
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಸನ್ಮಾರ್ಗ ವಾರ್ತೆ

ಹರಿದ್ವಾರ: ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ನಿಧನದ ನಂತರ ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು ಜ್ಯೋತಿಷ್ ಪೀಠದ ನೂತನ ಶಂಕರಾಚಾರ್ಯರನ್ನಾಗಿ ಸ್ವೀಕರಿಸಲು ಸನ್ಯಾಸಿ ಅಖಾಡ ನಿರಾಕರಿಸಿದೆ.

ಗುಜರಾತ್‌ನ ದ್ವಾರಕಾ ಶಾರದಾ ಪೀಠ ಮತ್ತು ಉತ್ತರಾಖಂಡದ ಜ್ಯೋತಿಷ್ ಪೀಠದ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು  ಸೆಪ್ಟೆಂಬರ್ 11ರಂದು ನಿಧನರಾದರು. ಇದರ ನಂತರ, ಸ್ವಾಮಿ  ಸ್ವರೂಪಾನಂದರವರ ಉಯಿಲಿನ ಆಧಾರದ ಮೇರೆಗೆ, ಅವಿಮುಕ್ತೇಶ್ವರಾನಂದರನ್ನು ನೂತನ
ಶಂಕರಾಚಾರ್ಯರಾಗಿ ಘೋಷಿಸಲಾಗಿತ್ತು‌.

ಆದರೆ, ನಿರಂಜನಿ ಅಖಾಡದ ಕಾರ್ಯದರ್ಶಿ ಹಾಗೂ ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಅವರು, ನಿಯಮಗಳಿಗೆ ವಿರುದ್ಧವಾಗಿ ಅವಿಮುಕ್ತೇಶ್ವರಾನಂದ ಅವರನ್ನು ನೇಮಕವನ್ನು ಮಾಡಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಶಂಕರಾಚಾರ್ಯರ ನೇಮಕಕ್ಕೆ ವಿಧಿವಿಧಾನವಿದ್ದು ಅದನ್ನು ಪಾಲಿಸಿಲ್ಲ. ನೂತನ ಶಂಕರಾಚಾರ್ಯರ ನೇಮಕಕ್ಕೆ ಕಾರ್ಯತಂತ್ರ ರೂಪಿಸಲು ಎಲ್ಲಾ ಏಳು ಅಖಾಡಾಗಳು ಶೀಘ್ರದಲ್ಲೇ ಸಭೆ ಸೇರಲಿವೆ ಎಂದೂ ಅವರು ಹೇಳಿದ್ದಾರೆ‌.