ಡ್ರೋನ್ ದಾಳಿ ಹಿನ್ನೆಲೆ: ಇಸ್ರೇಲ್‌ನ ವಾಯು ರಕ್ಷಣಾ ತಂತ್ರಜ್ಞಾನ ಖರೀದಿಗೆ ಮುಂದಾದ ಯುಎಇ

0
186

ಸನ್ಮಾರ್ಗ ವಾರ್ತೆ

ಡ್ರೋನ್ ದಾಳಿಯನ್ನು ತಡೆಯಬಲ್ಲ ಅತ್ಯಾಧುನಿಕ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಇಸ್ರೇಲ್ ಯುಎಇಗೆ ಮಾರಾಟ ಮಾಡಲಿದೆ ಎಂದು ವರದಿಯಾಗಿದೆ. ಈಗಾಗಲೇ ಇಸ್ರೇಲ್‌ನೊಂದಿಗೆ ರಫೆಲ್ ನಿರ್ಮಿತ ಸ್ಪೈಡರ್ ಮೊಬೈಲ್ ಸಿಸ್ಟಮ್‌ಗಾಗಿ ಯುಎಇ ಕೋರಿ ಕೊಂಡಿದ್ದು,
ಇಸ್ರೇಲ್ ಅದಕ್ಕೆ ಒಪ್ಪಿಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷ ಅಬುಧಾಬಿ ಮೇಲೆ ಡ್ರೋನ್ ದಾಳಿ ನಡೆದಿದ್ದು, ಅಂತಹ ದಾಳಿಯನ್ನು ತಡೆಗಟ್ಟುವುದಕ್ಕೆ ಇಸ್ರೇಲಿನಿಂದ ಸೂಕ್ತ ತಂತ್ರಜ್ಞಾನವನ್ನು ಯುಎಇ ಖರೀದಿಸಲಿದೆ ಎಂದು ತಿಳಿದು ಬಂದಿದೆ. 2020ರಲ್ಲಿ ಯುಎಇ ಮತ್ತು ಇಸ್ರೇಲ್ ತಮ್ಮ ನಡುವಿನ ಸಂಬಂಧವನ್ನು ಸಹಜ ಗೊಳಿಸಿತ್ತು.

ಈ ಕುರಿತಂತೆ ಪ್ರತಿಕ್ರಿಯೆ ನೀಡಲು ಇಸ್ರೇಲ್‌ನ ರಕ್ಷಣೆ ಮತ್ತು ವಿದೇಶಾಂಗ ಸಚಿವಾಲಯದ ಮುಖ್ಯಸ್ಥರು ನಿರಾಕರಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಅಬುಧಾಬಿಯ ಮೇಲೆ ಯೆಮನ್‌‌ನ ಹುತಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದರು.