ಮುಂದೆ ಕೊರೋನಕ್ಕಿಂತ ಭಯಾನಕ ಸೋಂಕು ರೋಗಗಳು ಬರಲಿವೆ; ಪ್ರತಿರೋಧಿಸಲು ಹೆಚ್ಚು ಹಣ ವ್ಯಯಿಸಬೇಕಾದೀತು: ಸರಾಹ್ ಗಿಲ್ಬರ್ಟ್

0
265

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಮುಂದಕ್ಕೆ ಕೊರೋನಕ್ಕಿಂತಲೂ ಭಯಾನಕವಾದ ಸಾಂಕ್ರಾಮಿಕ ರೋಗಗಳು ಬರಲಿವೆ ಎಂದು ಆಕ್ಸ್ಫರ್ಡ್-ಆಸ್ಟ್ರಾಸೆನಕ್ ವಾಕ್ಸಿನ್‍ಗಾಗಿ ಕಾರ್ಯನಿರ್ವಹಿಸಿದ್ದ ವಿಜ್ಞಾನಿಗಳಲ್ಲೊಬ್ಬರಾದ ಪ್ರೊ.ಡೊಮ ಸರಾಹ್ ಗಿಲ್ಬಟ ಹೇಳಿದ್ದಾರೆ. ಅಂಟು ರೋಗಗಳನ್ನು ಪ್ರತಿರೋಧಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಓಮಿಕ್ರಾನ್ ರೂಪಾಂತರಕ್ಕೆ ಈಗಿನ ಲಸಿಕೆಯಿಂದ ಹೆಚ್ಚು ಪ್ರಯೋಜನವಾಗುತ್ತದೆ ಎನ್ನುವಂತಿಲ್ಲ ಎಂದು ಅವರು ಹೇಳಿದರು.

ನಮ್ಮ ಜೀವನವನ್ನು ಮತ್ತು ಜೀವನೋಪಾಧಿಗಳನ್ನು ವೈರಸ್ ಆಕ್ರಮಿಸುವ ಕೊನೆಯ ಘಟನೆ ಎಂದು ಕೊರೋನ ರೋಗವನ್ನು ತಿಳಿಯುವಂತಿಲ್ಲ ಎಂದರು. ಇದಕ್ಕಿಂತಲೂ ತೀವ್ರವಾದ ವೈರಸ್ ಬಾಧೆ ಎದುರಿಸಬೇಕಾಗಬಹುದು. ಕೊರೋನಕ್ಕಿಂತ ವೇಗದಲ್ಲಿ ಹರಡುವ ತೀವ್ರ ವೈರಸ್ಸನ್ನು ನಮಗೆ ಎದುರಿಸಬೇಕಾಗಿದೆ. ಇನ್ನು ಕೂಡ ನಾವು ಇಂತಹ ಪರಿಸ್ಥಿತಿಯಿಂದ ಹಾದು ಹೋಗಲು ಶಕ್ತರಾಗಿಲ್ಲ. ಆದರೂ ಸಾಂಕ್ರಾಮಿಕ ರೋಗಗಳಿಗೆ ಅದು ಬರುವ ಮೊದಲೇ ಈಗಲೇ ಫಂಡ್ ವ್ಯಯಿಸಬೇಕಾಗಿದೆ. ಒಮ್ರಿಕಾನ್ ಕುರಿತು ಹೆಚ್ಚು ಹೆಚ್ಚು ಅಧ್ಯಯನಗಳು ಬರವವರೆಗೆ ಜನರು ಜಾಗೃತೆ ವಹಿಸಬೇಕೆಂದು ಅವರು ಹೇಳಿದರು.