ಸರ್ಕೋಝಿಯ ಚುನಾವಣಾ ಅಭಿಯಾನಕ್ಕೆ ಆರ್ಥಿಕ ಸಹಾಯ ಒದಗಿಸಿದ್ದ ಮುಅಮ್ಮರ್ ಗದ್ದಾಫಿ: ಲಿಬಿಯಾ ಗೂಢಚರ ಮುಖ್ಯಸ್ಥನಿಂದ ಸ್ಪೋಟಕ ಮಾಹಿತಿ

0
520

ಕೃಪೆ: ಮಿಡ್ಲ್ ಈಸ್ಟ್ ಮಾನಿಟರ್

ಕನ್ನಡಕ್ಕೆ: ಆಯಿಷಾ ಅಫೀಫಾ

ಮೀಡಿಯಾ ಪಾರ್ಟ್ ನ ಪ್ರಕಾರ, ಮಾಜಿ ಫ್ರೆಂಚ್ ರಾಷ್ಟ್ರಪತಿ ನಿಕೋಲಸ್ ಸರ್ಕೋಝಿಯವರು 2007 ರ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗದ್ದಾಫಿ ಯಿಂದ ಸುಮಾರು 8 ಮಿಲಿಯನ್ ಡಾಲರ್ ಗಳನ್ನು ಸ್ವೀಕರಿಸಿದ್ದಾರೆಂದು ಲಿಬಿಯಾದ ಮಾಜಿ ಗೂಢಚಾರ ಮುಖ್ಯಸ್ಥ ಮೊಹಮದ್ ಅಬ್ದುಲ್ಲಾ ಸೆನುಸಿ ಅವರು ಫ್ರೆಂಚ್ ಅಧಿಕಾರಿಗಳಿಗೆ ದೃಢಪಡಿಸಿದ್ದಾರೆ.

ಪ್ರಾನ್ಸ್ ನ ಪ್ಯಾರಿಸ್ ನಿಂದ ಲಿಬಿಯಾದ ಟ್ರಿಪೊಲಿಗೆ ಪ್ರಯಾಣಿಸಿದ ಇಬ್ಬರು ನ್ಯಾಯಾಧೀಶರು, ಲಿಬಿಯಾ ಸೇನಾಪತಿಯ ಅಳಿಯನೂ ಆಗಿರುವ ಸೆನುಸ್ಸಿಯವರನ್ನು ಭೇಟಿ ಮಾಡಿದರು. ಗಡ್ಡಾಫಿ ಮತ್ತು ಸರ್ಕೋಜಿಯವರ ನಡುವಿನ ಆರ್ಥಿಕ ಸಂಬಂಧಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ, ವಿಶೇಷವಾಗಿ 2007 ರ ಫ್ರೆಂಚ್ ಚುನಾವಣೆಗಳ ಕುರಿತು ಅವರು ವಿವರಗಳನ್ನು ಪಡೆದರು.

ಮೀಡಿಯಾ ಪಾರ್ಟ್ ನ ಪ್ರಕಾರ, ಕರ್ನಲ್ ಗಡ್ಡಾಫಿ ಅವರ ಆದೇಶದಂತೆ ಸರ್ಕೋಜಿಯವರ ಚುನಾವಣಾ ಅಭಿಯಾನಕ್ಕೆ ಬಹು-ಮಿಲಿಯನ್ ಡಾಲರ್ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ಸೆನ್ಸುಸಿ ಹೇಳಿದ್ದಾರೆ ಈ ಉಪಕಾರಕ್ಕೆ ಪ್ರತಿಯಾಗಿ, ಸೆನುಸ್ಸಿ ವಿರುದ್ಧ 1989 ರ ಫ್ರೆಂಚ್ ವಿಮಾನ ಸ್ಫೋಟದ ಆರೋಪದಲ್ಲಿ ಪ್ಯಾರಿಸ್ ನ್ಯಾಯಾಲಯವು ಘೋಷಿಸಿದ್ದ ಅಂತಾರಾಷ್ಟ್ರೀಯ ಬಂಧನ ವಾರಂಟ್ ಅನ್ನು ಮಾಜಿ ಫ್ರೆಂಚ್ ಅಧ್ಯಕ್ಷರ ಖಾಸಗಿ ವಕೀಲ ಮತ್ತು ಸ್ನೇಹಿತ ಥಿಯೆರ್ರಿ ಹೆರ್ಜಾಗ್ ಅವರು ರದ್ದುಗೊಳಿಸಲು ಪ್ರಯತ್ನಿಸಿದ್ದಾರೆ.

“ಬಾಂಬ್ ದಾಳಿಯ ಬಲಿಪಶುಗಳ ಕೆಲವು ಕುಟುಂಬಗಳ ಜೊತೆ ಸರ್ಕೋಜಿಯ ವಕೀಲರು ನನ್ನನ್ನು ಭೇಟಿ ಮಾಡಿದ್ದರು. ಅದರ ನಂತರ, ಸರ್ಕೋಝಿಯವರು ನನ್ನ ಪ್ರಕರಣವನ್ನು ಫ್ರಾನ್ಸ್ ನಲ್ಲಿ ಹತ್ತು ತಿಂಗಳಲ್ಲಿ ಬಗೆಹರಿಸಲಾಗುವುದು ಎಂದು ನನಗೆ ಭರವಸೆ ನೀಡಿದರು” ಎಂದು ಅವರು ವಕೀಲರಿಗೆ ತಿಳಿಸಿದರು. ನಂತರ ಸರ್ಕೊಜಿಯವರು ತನ್ನ ವಿರುದ್ಧದ ಸಾಕ್ಷಿಗಳನ್ನು ನಾಶಮಾಡಲು ನನ್ನ ಮನೆಯ ಮೇಲೆ ವಾಯುದಾಳಿಗೆ ಆದೇಶಿಸಿದ್ದರು ಎಂದು ಸೆನುಸಿ ಹೇಳಿದರು.

ಕಳೆದ ವರ್ಷ, ಸರ್ಕೋಜಿಯವರು ದೂರದರ್ಶನದ ಮುಖ್ಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು, ಲಿಬಿಯಾ ನಿಧಿಯ ಆರೋಪಗಳನ್ನು ತಿರಸ್ಕರಿಸಿದ್ದರು ಮತ್ತು ಆಪಾದನೆಗಳು ತನ್ನ ಜೀವನವನ್ನು “ನರಕವನ್ನಾಗಿ” ಮಾಡಿದೆ ಎಂದು ತಿಳಿಸಿದ್ದರು. “ಸಾಕ್ಷ್ಯದ ಅತ್ಯಂತ ಚಿಕ್ಕದಾದ ಸುಳಿವೂ ಇಲ್ಲ” ದುಃಖಿತರಂತೆ ಕಾಣುತ್ತಿದ್ದ ಸರ್ಕೋಝಿ ಮಾರ್ಚ್ ನಲ್ಲಿ ನಡೆದ 25 ನಿಮಿಷಗಳ ಸಂಜೆ ಸುದ್ದಿ ಸಂದರ್ಶನದಲ್ಲಿ, ತನ್ನ ಒಟ್ಟು ಪ್ರಚಾರ ಬಜೆಟ್ ನ ಕೇವಲ 0.0018 ರಷ್ಟು ಮಾತ್ರವಾಗಿರುವ ಕೇವಲ 38,000 ಯೂರೋಗಳನ್ನು ($ 43,100) ಸ್ವೀಕರಿಸಿರುವ ಆಪಾದನೆ ಇದೆ ಎಂದು ಅವರು ತಿಳಿಸಿದ್ದರು.

ಆದರೂ ಹಣವನ್ನು ಫ್ರೆಂಚ್ ಆಂತರಿಕ ಮಂತ್ರಿಗೆ 2006 ರಲ್ಲಿ ಎರಡು ಕಂತುಗಳಲ್ಲಿ ವರ್ಗಾಯಿಸಲಾಗಿದೆ ಎಂಬ ಸೆನುಸ್ಸಿಯವರ ಇತ್ತೀಚಿನ ಹೇಳಿಕೆಯನ್ನು ಬಲವಾಗಿ ನಂಬಲಾಗಿದೆ. ಮೀಡಿಯಾ ಪಾರ್ಟ್ ಪ್ರಕಾರ, ತನಿಖಾಧಿಕಾರಿಗಳು ಈಗಾಗಲೇ ಸಂಗ್ರಹಿಸಿದ ಕೆಲವು ಸಾಕ್ಷ್ಯಗಳು ಸೆನುಸ್ಸಿಯ ಹೇಳಿಕೆಗೆ ಪುಷ್ಟಿ ನೀಡುತ್ತಿದೆ.