ಭಯೋತ್ಪಾದಕರ ವಿರುದ್ಧ ತುರ್ತು ಕ್ರಮ ಜರಗಿಸಿ-ಪಾಕ್ ಮೇಲೆ ಆಸ್ಟ್ರೇಲಿಯ ಒತ್ತಡ

0
389

ಕಾನ್‍ಬೆರ: ಭಯೋತ್ಪಾದನಾ ಗುಂಪುಗಳ ವಿರುದ್ಧ ಪಾಕಿಸ್ತಾನ ತುರ್ತು ಕ್ರಮ ಜರಗಿಸಬೇಕೆಂದು ಆಸ್ಟ್ರೇಲಿಯ ಆಗ್ರಹಿಸಿದೆ. ಜೈಷೆ ಮುಹಮ್ಮದ್, ಲಷ್ಕರೆತಯ್ಯಿಬದಂತಹ ಸಂಘಟನೆಗಳ ವಿರುದ್ಧ ತುರ್ತಾಗಿ ಶಕ್ತಿಶಾಲಿ ಕ್ರಮ ಕೈಗೊಳ್ಳಭೇಕೆಂದು ಆಸ್ಟ್ರೇಲಿಯ ಒತ್ತಾಯಿಸಿದೆ. ಎರಡು ಸಂಘಟನೆಗಳು ಭಾರತದಲ್ಲಿ ಹಲವು ಭಯೋತ್ಪಾದನಾ ದಾಳಿಗಳನ್ನು ನಡೆಸಿದೆ. ಅವರು ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯದ ವಿದೇಶ ಸಚಿವ ಮಾರಿಸ್ ಪೇನ್ ಹೇಳಿಕೆಯಲ್ಲಿ ತಿಳಿಸಿದರು.

ಇಂತಹ ಭಯೋತ್ಪಾದನಾ ಸಂಘಟನೆಗಳಿಗೆ ಪಾಕಿಸ್ತಾನ ಅವಕಾಶ ನೀಡಬಾರದು ಎಂದು ಆಸ್ಟ್ರೇಲಿಯ ಆಗ್ರಹಿಸಿದೆ. ಫೆಬ್ರುವರಿ ಹದಿನಾಲ್ಕಕ್ಕೆ ಜಮ್ಮು ಕಾಶ್ಮೀರದ ಪುಲ್‍ವಾಮದಲ್ಲಿ 40 ಮಂದಿ ಯೋಧರನ್ನು ಹತ್ಯೆ ಮಾಡಿದುದರ ಹೊಣೆಯನ್ನು ಪಾಕಿಸ್ತಾನದ ಜೈಷೆ ಮುಹಮ್ಮದ್ ವಹಿಸಿಕೊಂಡಿತ್ತು.

ಅದಕ್ಕೆ ಪ್ರತ್ಯುತ್ತರವಾಗಿ ಭಾರತವು ಪಾಕ್ ಅಧೀನ ಕಾಶ್ಮೀರದಲ್ಲಿ ಜೈಷೆ ಕೇಂದ್ರಗಳಿಗೆ ದಾಳಿ ಮಾಡಿದೆ. ಈ ಘಟನೆಯ ನಂತರ ಪಾಕಿಸ್ತಾನಕ್ಕೆ ಆಸ್ಟ್ರೇಲಿಯ ಈ ಎಚ್ಚರಿಕೆ ನೀಡಿದೆ.