ಫೆಲೆಸ್ತೀನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಸೌದಿ ಖಂಡನೆ

0
137

¸ಸನ್ಮಾರ್ಗ ವಾರ್ತೆ

ರಿಯಾದ್: ಫೆಲೆಸ್ತೀನ್ ಜಿನಿನ್ ನಿರಾಶ್ರಿತರ ಶಿಬಿರದ ಒಂಬತ್ತು ಮಂದಿಯನ್ನು ಹತ್ಯೆಗೈದ ಇಸ್ರೇಲ್ ಸೇನೆಯ ಕ್ರೌರ್ಯವನ್ನು ಸೌದಿ ಅರೇಬಿಯಾ, ಕುವೈಟ್, ಒಮಾನ್ ಖಂಡಿಸಿದೆ. ಇಸ್ರೇಲಿನ ವಸಾಹತು ಶಾಹಿಯನ್ನು ಕೊನೆಗೊಳಿಸಬೇಕೆಂದೂ ನಾಗರಿಕರಿಗೆ ಅಗತ್ಯ ಸಂರಕ್ಷಣೆ ನೀಡಬೇಕೆಂದು ಅದಕ್ಕೆ ಬೇಕಾದ ಜವಾಬ್ದಾರಿಕೆ ವಹಿಸಿಕೊಳ್ಳಬೇಕೆಂದು ಅಂತರ್ರಾಷ್ಟ್ರೀಯ ಒಕ್ಕೂಟಗಳಿಗೆ ಸೌದಿ ವಿದೇಶ ಸಚಿವಾಲಯ ಕರೆ ನೀಡಿದೆ. ಇಸ್ರೇಲ್ ನಡೆಸುತ್ತಿರುವ ದಾಳಿಗಳು ಅಂತರ್ರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಗಾಯಗೊಂಡವರು ಆದಷ್ಟು ಶೀಘ್ರದಲ್ಲಿ ಗುಣಮುಖರಾಗಲಿ. ಬಲಿಯಾದವರ ಕುಟುಂಬಗಳಿಗೆ ಮತ್ತು ಫೆಲೆಸ್ತೀನ್ ಸರಕಾರಕ್ಕೆ ತಮ್ಮ ಶೋಕ ಸಂದೇಶವನ್ನು ಕಳುಹಿಸಿದೆ.

ಫೆಲೆಸ್ತೀನ್ ದಕ್ಷಿಣ ನಗರವಾದ ಜೆನಿನಾದ ತುಂಬಿ ತುಳುಕಿದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆಯು ಗುರುವಾರ ದಾಳಿ ನಡೆಸಿ ವೃದ್ದರ ಸಹಿತ ಒಂಬತ್ತು ಮಂದಿಯನ್ನು ಹತ್ಯೆಗೈದಿತ್ತು. ಗಾಯಗೊಂಡವರನ್ನು ಸಾಗಿಸುತ್ತಿದ್ದ ಅಂಬುಲೆನ್ಸನ್ನು ಯುದ್ದ ಟ್ಯಾಂಕ್ ಬಳಸಿ ಇಸ್ರೇಲ್ ಸೇನೆಯು ತಡೆದಿತ್ತು. ಈ ದಾಳಿಯಲ್ಲಿ ಇಪ್ಪತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ಥೀನ್ ಆರೋಗ್ಯ ಸಚಿವಾಲಯ ವರದಿ ಮಾಡಿತ್ತು.