ಸನ್ಮಾರ್ಗ ವಾರ್ತೆ
ಸೌದಿ ಅರೇಬಿಯಾ ಸರ್ಕಾರವು ದೇಶದಲ್ಲಿ ವಿದ್ಯುತ್, ನೀರು ಮತ್ತು Wastewater ಶುಲ್ಕವನ್ನು ಪರಿಷ್ಕರಿಸಿ ಹೊಸ ದರಗಳನ್ನು ಘೋಷಿಸಿದೆ. ಈ ಹೊಸ ದರಗಳು 2027ರ ಜನವರಿ 1 ರಿಂದ ಜಾರಿಗೆ ಬರಲಿವೆ.
ಎಲ್ಲಾ ಹೊಸ ವಿದ್ಯುತ್, ನೀರು ಮತ್ತು ಒಳಚರಂಡಿ ಶುಲ್ಕಗಳು ಮತ್ತು ಪರಿಷ್ಕೃತ ದರಗಳು 2027ರ ಜನವರಿ 1ರಿಂದ ಅಧಿಕೃತವಾಗಿ ಅನ್ವಯವಾಗಲಿವೆ.
ವಸತಿ ಕ್ಷೇತ್ರಕ್ಕೆ ಮಾಸಿಕ ವಿದ್ಯುತ್ ತಿಂಗಳಿಗೆ 6,000 kWh ವರೆಗಿನ ಬಳಕೆಗೆ ಪ್ರತಿ ಕಿಲೋವ್ಯಾಟ್-ಗಂಟೆಗೆ 21 ಹಲಾಲಾ ಇರಲಿದೆ . 6,000 kWh ಗಿಂತ ಹೆಚ್ಚಿನ ಬಳಕೆಗೆ ಪ್ರತಿ kWh ಗೆ 33 ಹಲಾಲಾ ಶುಲ್ಕವಿರುತ್ತದೆ. ಇದರೊಂದಿಗೆ ಮಾಸಿಕ ನಿಗದಿತ ಶುಲ್ಕಗಳು ಕೂಡ ಅನ್ವಯವಾಗಲಿವೆ.
ನೀರಿನ ಶುಲ್ಕವು ಬಳಕೆಯ ಸ್ಲ್ಯಾಬ್ಗಳ ಆಧಾರದ ಮೇಲೆ ಬದಲಾಗಲಿದೆ. ಆರಂಭಿಕ ಹಂತದಲ್ಲಿ ಪ್ರತಿ ಕ್ಯೂಬಿಕ್ ಮೀಟರ್ಗೆ 1 ಸೌದಿ ರಿಯಾಲ್ ನಿಂದ ಶುಲ್ಕ ಪ್ರಾರಂಭವಾಗಿ, ಬಳಕೆ ಹೆಚ್ಚಾದಂತೆ ದರಗಳು ಏರಿಕೆಯಾಗಲಿವೆ.
Wastewater ಸೇವಾ ಶುಲ್ಕವು ನೀರಿನ ಬಳಕೆಯ ಆಧಾರದ ಮೇಲೆ ಪ್ರತಿ ಕ್ಯೂಬಿಕ್ ಮೀಟರ್ಗೆ 0.50 ಸೌದಿ ರಿಯಾಲ್ ನಿಂದ 3 ಸೌದಿ ರಿಯಾಲ್ ವರೆಗೆ ಇರಲಿದೆ. ನೀರಿನ ಮೀಟರ್ ಗಾತ್ರಕ್ಕೆ ಅನುಗುಣವಾಗಿ ಮಾಸಿಕ ಮೀಟರ್ ಶುಲ್ಕಗಳು ಕೂಡ ಅನ್ವಯವಾಗುತ್ತವೆ.
ಯುಟಿಲಿಟಿ ಶುಲ್ಕಗಳ ಹೆಚ್ಚಳದಿಂದ ತನ್ನ ನಾಗರಿಕರಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸೌದಿ ದೊರೆ ಕಿಂಗ್ ಸಲ್ಮಾನ್ ಮತ್ತು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನಿರ್ದೇಶನದ ಮೇರೆಗೆ ವಿಶೇಷ ಪರಿಹಾರ ಕ್ರಮಗಳನ್ನು ಘೋಷಿಸಲಾಗಿದೆ. ಅರ್ಹ ಸೌದಿ ನಾಗರಿಕರು, ಪಿಂಚಣಿದಾರರು ಮತ್ತು ಸಾಮಾಜಿಕ ಭದ್ರತಾ ಫಲಾನುಭವಿಗಳಿಗೆ ಮಾಸಿಕ ಭತ್ಯೆಯಲ್ಲಿ 500 ಸೌದಿ ರಿಯಾಲ್ ಹೆಚ್ಚಳ ಮಾಡಲಾಗಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಸೌದಿ ಪ್ರಜೆಗಳ ವೇತನವನ್ನು ಹೆಚ್ಚಿಸುವ ಉಪಕ್ರಮಗಳನ್ನೂ ಸಹ ಕೈಗೊಳ್ಳಲಾಗಿದೆ.
ಆದರೆ ವಿದೇಶಿಗಳಿಗೆ ಇದು ತೀವ್ರ ಹೊರೆಯಾಗಲಿದೆ.












