ಲಕ್ನೊ, ಜು.8: ನಿರಂತರ ಪವರ್ಕಟ್ನಿಂದಾಗಿ ಉತ್ತರಪ್ರದೇಶದಲ್ಲಿ ರೋಗಿಗಳನ್ನು ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆನೀಡಲಾಗುತ್ತಿದೆ. ಸಂಭಾಲ್ನ ಆಸ್ಪತ್ರೆಯಲ್ಲಿ ಇಂತಹ ದೃಶ್ಯಗಳು ಕಂಡು ಬಂದಿದೆ. ಕತ್ತಲು ಕೋಣೆಯಲ್ಲಿ ವೈದ್ಯರು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳು ವೈರಲಾಗಿದೆ. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ ಎಂದು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಆರೋಪಿಸುತ್ತಿದ್ದಾರೆ. ವಿದ್ಯುತ್ ನಿಲುಗಡೆಯಾದಾಗ ಬಳಸುವ ಇನ್ ವೆರ್ಟರ್ ಗಳು ಇಲ್ಲ. ಇದರಿಂದಾಗಿ ಗಂಟೆಗಟ್ಟಲೆ ಕಾಲ ವಿದ್ಯುತ್ ಇಲ್ಲದ ಪರಿಸ್ಥಿತಿ ಇದೆ ಎಂದು ರೋಗಿಗಳಲ್ಲಿ ಒಬ್ಬರು ಎಎನ್ಐಗೆ ತಿಳಿಸಿದರು. ಇದೇವೇಳೆ ಆಸ್ಪತ್ರೆಯಲ್ಲಿ ಸಮಸ್ಯೆಗಳಿಲ್ಲ ಎಂದು ಆಸ್ಪತ್ರೆಯ ಸುಪರಿಡೆಂಟ್ ಡಾ. ಎ.ಕೆ. ಗುಪ್ತ ಹೇಳಿದರು. . ಭಾರೀ ಮಳೆಯಿಂದಾಗಿ ಒಂದು ಗಂಟೆ ಮಾತ್ರ ವಿದ್ಯುತ್ ವಿತರಣೆಯಲ್ಲಿ ಅಡಚಣೆಯಾಗಿತ್ತು. ಪವರ್ ಕಟ್ ಸಮಯದಲ್ಲಿ ಎಲ್ಲ ಸೌಕರ್ಯವನ್ನು ಒದಗಿಸಲಾಗಿತ್ತು. ಆದರೆ ಒಬ್ಬ ಪತ್ರಕರ್ತ ಪವರ್ ಕಟ್ ಸಮಯದಲ್ಲಿ ರೋಗಿಗೆ ಚಿಕಿತ್ಸೆ ನೀಡುವ ಚಿತ್ರಗಳನ್ನು ತೆಗೆದು ಪ್ರಚಾರ ಮಾಡಿದ್ದಾನೆ ಎಂದು ಡಾ.ಎ.ಕೆ ಗುಪ್ತ ಆರೋಪಿಸಿದ್ದಾರೆ.












