ಸನ್ಮಾರ್ಗ ವಾರ್ತೆ
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ತಮ್ಮ ಮೂವರು ಟೇಕಾನ್ಡ್ ವೋ ಆಟಗಾರರು ಬಲಿಯಾಗಿದ್ದಾರೆ ಎಂದು ಇರಾನ್ ಫೆಡರೇಶನ್ ತಿಳಿಸಿದೆ. ಇದರಲ್ಲಿ ಫೆಡರೇಶನ ಎಳೆಯ ತಾರೆಯಾಗಿದ್ದ ಮತ್ತು ಇರಾನ್ ನ ಭವಿಷ್ಯದ ಆಟಗಾರ ಎಂದೇ ಗುರುತಿಸಿಕೊಂಡಿದ್ದ ಅಮೀರ್ ಅಲಿ ಕೂಡ ಸೇರಿದ್ದಾನೆ ಎಂದು ಫೆಡರೇಶನ್ ತಿಳಿಸಿದೆ. ಇರಾನಿನ ಅನೇಕ ಮಾಧ್ಯಮಗಳು ಈ ಹತ್ಯಾ ಸುದ್ದಿಯನ್ನು ಪ್ರಕಟಿಸಿವೆ
ಈ ಬಗ್ಗೆ ಇರಾನಿನ ವಿದೇಶಾಂಗ ವಕ್ತಾರರು ಅಮೀರ್ ಅಲಿಯ ಚಿತ್ರವನ್ನು ತೋರಿಸಿ ಸ್ಪಷ್ಟನೆ ನೀಡಿದ್ದಾರೆ. ನಾಗರಿಕ ಹತ್ಯೆಗೆ ಸಾಕ್ಷಿಯಾಗಿ ಈ ಸಾವನ್ನು ಇರಾನ್ ಜಗತ್ತಿನ ಮುಂದಿಟ್ಟಿದೆ. ಅತ್ಯಂತ ಭರವಸೆಯ ಟೆಕಾ0ಡೋ ಆಟಗಾರನಾಗಿ ಅಮೀರ್ ಅಲಿ ಗುರುತಿಸಿಕೊಂಡಿದ್ದ. ಈತನ ಹತ್ಯೆಯು ಸೋಶಿಯಲ್ ಮೀಡಿಯಾದಲ್ಲಿ ಮತ್ತು ಪತ್ರಿಕೆಗಳಲ್ಲಿ ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಇರಾನಿನ ಯುರೇನಿಯಂ ಸಂಸ್ಕರಣೆಯ ಮೇಲೆ ತಾನು ದಾಳಿ ನಡೆಸುವುದಾಗಿ ಹೇಳಿರುವ ಇಸ್ರೇಲ್ ವಾಸ್ತವದಲ್ಲಿ ನಾಗರಿಕ ಪ್ರದೇಶಗಳ ಮೇಲೆ ಬಾಂಬ್ ಹಾಕ್ತಾ ಇದೆ ಮತ್ತು ಈವರೆಗೆ 300 ರಷ್ಟು ಮಂದಿಯ ಹತ್ಯೆ ನಡೆಸಿದೆ ಎಂದು ವರದಿಯಾಗಿದೆ












