ಸನ್ಮಾರ್ಗ ವಾರ್ತೆ
ರಿಯಾದ್, ಎ.30: ಕೊರೊನ ಹಿನ್ನೆಲೆಯಲ್ಲಿ ಸೌದಿ ಅರೇಬಿಯದಿಂದ ಊರಿಗೆ ಮರಳಲು ಬಯಸಿದವರ ವಿವರವನ್ನು ಭಾರತದ ದೂತಾವಾಸ ಸಂಗ್ರಹಿಸುತ್ತಿದೆ. ಗೂಗಲ್ ಫಾರ್ಮ್ನಲ್ಲಿ ವಿವರವನ್ನು ಸಂಗ್ರಹಿಸಲಾಗುವುದು. ಊರಿಗೆ ಮರಳಲು ಬಯಸುವವರು ಯಾರಿದ್ದಾರೆ ಎಂದು ತಿಳಿಯುವ ವಿವರವನ್ನು ಈಗ ಸಂಗ್ರಹಿಸಲು ದೂತಾವಾಸ ವಿಶೇಷ ಗಮನ ನೀಡುತ್ತಿದೆ. ಭಾರತಕ್ಕೆ ವಿಮಾನ ಸೇವೆ ಪುನರಾರಂಭಿಸುವ ಕುರಿತು ಇದುವರೆಗೆ ತೀರ್ಮಾನಿಸಲಾಗಿಲ್ಲ.
ಅನಿವಾಸಿಗಳನ್ನು ಊರಿಗೆ ಕರೆತರಲು ಭಾರತ ಸರಕಾರ ತೀರ್ಮಾನಿಸಿದರೆ ಈ ವಿಷಯವನ್ನು ಸೌದಿ ಅರೇಬಿಯ ಅನಿವಾಸಿ ಭಾರತೀಯರಿಗೆ ತಿಳಿಸಲಿದೆ. ಗೂಗಲ್ ಫಾರಂನಲ್ಲಿ ಒಬ್ಬರ ಹೆಸರು ವಿವರ ಮಾತ್ರ ಸೇರಿಸಲು ಆಗುತ್ತದೆ. ಕುಟುಂಬ ಸದಸ್ಯರ ವಿವರಗಳನ್ನು ಸೇರಿಸಬೇಕಾದರೆ ಒಬ್ಬೊಬ್ಬರಿಗಾಗಿ ಒಂದೊಂದು ಫಾರ್ಮುಗಳನ್ನು ತುಂಬಬೇಕು. ಎಲ್ಲ ವಿವರಗಳೊಂದಿಗೆ ಸಲ್ಲಿಸಿದರೆ ಸಾಕು. ದೂತಾವಾಸಕ್ಕೆ ಇಮೇಲ್ ಕಳುಹಿಸುವ ಅಗತ್ಯವಿಲ್ಲ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












