ಅಮೆರಿಕದ ಜೈಲುಗಳಲ್ಲಿ ಕೈದಿಗಳಿಗೆ ಉಪವಾಸ ಆಚರಿಸಲು ಅನುಮತಿಸುತ್ತಿಲ್ಲ: ಮಾನವ ಹಕ್ಕು ಸಂಘಟನೆಗಳು

0
707

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ. 30: ಅಮೆರಿಕದ ಜೈಲುಗಳಲ್ಲಿ ಹಲವು ಕೈದಿಗಳನ್ನು ರಮಝಾನ್‍ನ ಉಪವಾಸ ಆಚರಿಸಲು ಬಿಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ವರ್ ಜೀನಿಯ ಜೈಲಿನಲ್ಲಿ ಕೆಲವು ಮುಸ್ಲಿಂ ಕೈದಿಗಳು ಹೀಗೆ ಆರೋಪಿಸಿದ್ದಾರೆ ಎಂದು ಮಾನವಹಕ್ಕು ಸಂಘಟನೆಗಳು ವರದಿ ಮಾಡಿವೆ. ಜೈಲುಗಳು ಕೈದಿಗಳಿಗೆ ರಮಝಾನ್‍ನಲ್ಲಿ ಉಪವಾಸ ಆಚರಿಸಲು ಮತ್ತು ತೊರೆಯಲು ಸರಿಯಾದ ಆಹಾರ ಕೊಡುತ್ತಿಲ್ಲ. ಮೂರು ಮಾನವಹಕ್ಕು ಸಂಘಟನೆಗಳು ಕೂಡ ಈ ವಿಷಯದಲ್ಲಿ ಸಹಮತ ವ್ಯಕ್ತಪಡಿಸಿದೆ. ಅಧಿಕಾರಿಗಳು ಕೆಲವು ಮಂದಿಯನ್ನು ರಮಝಾನ್‍ನಲ್ಲಿ ಉಪವಾಸ ಆಚರಿಸುವವರ ಪಟ್ಟಿಯಲ್ಲಿ ಇರಿಸಿಲ್ಲ. ಇವರ ಮನವಿಯನ್ನು ಏಕಪಕ್ಷೀಯವಾಗಿ ತಿರಸ್ಕರಿಸಲಾಗುತ್ತಿದೆ ಎಂದು ಸಂಘಟನೆಗಳು ಆರೋಪಿಸಿದ್ದು ಇವರನ್ನು ಮುಸ್ಲಿಮರ ಪಟ್ಟಿಗೆ ಸೇರಿಸಿಲ್ಲ ಎಂದಿದೆ.

ತಮ್ಮ ರಮಝಾನ್ ಉಪವಾಸ ಹಿಡಿಯುವ ಹಕ್ಕು ಅಂಗೀಕಾವಾಗಿಲ್ಲ. ಇದನ್ನು ಅಂಗೀಕರಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಅಂಗೀಕಾರದ ನೀಡಿಲ್ಲ. ಈ ವಿಷಯದಲ್ಲಿ ಜೈಲು ಅಧೀಕ್ಷರಿಗೆ ಹಲವು ಅರ್ಜಿಗಳು ತಲುಪಿವೆ. ವಾಲನ್ಸ್ ರಿಡ್‍ಜ್‍ನ ಸ್ಟೇಟ್ ಜೈಲಿನಲ್ಲಿರುವ ಮುಸ್ಲಿಮರಿಗೆ ರಮಝಾನ್ ಉಪವಾಸ ಹಿಡಿಯಲು ಆಗುತ್ತಿಲ್ಲ ಎಂದು ಸಂಘಟನೆಗಳು ತಿಳಿಸಿವೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.