ಫ್ರಾನ್ಸಿಗೆ ಆಯುಧ ತರಲು ಹೋಗಿ ಖಾಲಿ ಕೈಯಲ್ಲಿ ಮರಳಿದ ಸೌದಿಯ ಹಡಗುಗಳು

0
1255

ಪ್ಯಾರಿಸ್,ಜೂ.1: ಆಯುಧಗಳಿಲ್ಲದೆ ಸೌದಿ ಅರೇಬಿಯದ ಹಡಗುಗಳು ಹಿಂದಿರುಗಿವೆ. ಸೌದಿ ಅರೇಬಿಯಕ್ಕೆ ಆಯುಧ ಕೊಡಬೇಡಿರಿ ಎಂದು ಫ್ರಾನ್ಸಿನ ಹಲವು ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ತದನಂತರ ಫ್ರಾನ್ಸ್ ಎಚ್ಚೆತ್ತುಕೊಂಡು ಸೌದಿಗೆ ಆಯುಧ ನೀಡಿಲ್ಲ. ಆಯುಧಕ್ಕಾಗಿ ತೆರಳಿದ ಹಡಗುಗಳು ಖಾಲಿ ಕೈಯಲ್ಲಿ ಮರಳಿ ಬಂದಿವೆ. ಫ್ರೆಂಚ್ ಮಾನವ ಹಕ್ಕು ಸಂಘಟನೆಯನ್ನು ಉದ್ಧರಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎರಡನೆ ಸಲ ಸೌದಿಯ ಕಾರ್ಗೋ ಹಡಗುಗಳು ಖಾಲಿಯಾಗಿ ಮರಳಿ ಬಂದಿವೆ. ಸೌದಿ ಅರೇಬಿಯಕ್ಕೆ ಆಯುಧ ಹಸ್ತಾಂತರಿಸುವುದನ್ನು ವಿರೋಧಿಸುತ್ತೇವೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.