ಬೀಷ,ಮೇ 25: ಕಾರು ಒಂಟೆಗೆ ಢಿಕ್ಕಿಯಾದ ಪರಿಣಾಮ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇವರೆಲ್ಲರೂ ಒಂದೇ ಕುಟುಂಬದವರು. ಪತಿ, ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಮೃತಪಟ್ಟರೆ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಸೌದಿ ಅರೇಬಿಯಾದ ಬೀಷ ರಯನ್ ರಸ್ತೆಯಲ್ಲಿ ಅಪಘಾತ ನಡೆಯಿತು. ಜನೀನ ಕೇಂದ್ರದ ಬಳಿ ಅಫಘಾತ ಸಂಭವಿಸಿದೆ. ಬಿಷ ವಲಯದಿಂದ ಜನೀನ ಕೇಂದ್ರ ಐವತ್ತು ಕಿಲೋಮೀಟರ್ ದೂರದಲ್ಲಿದೆ ಎಂದು ರಸ್ತೆ ಸುರಕ್ಷೆ ವಿಭಾಗ ತಿಳಿಸಿದೆ.












