NIAಗೆ ಹಿನ್ನಡೆ: ಸುಧಾ ಭಾರದ್ವಾಜ್‍ರ ಜಾಮೀನು ರದ್ದುಪಡಿಸಲಾಗದು ಎಂದ ಸುಪ್ರೀಂ ಕೋರ್ಟ್

0
245

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭೀಮಾ ಕೊರೇಗಾಂವ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರಧ್ವಾಜ್‍ರಿಗೆ ಮುಂಬೈ ಹೈ ಕೋರ್ಟು ನೀಡಿದ ಜಾಮೀನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟು ಎನ್‍ಐಎಯ ಅರ್ಜಿಯನ್ನು ತಳ್ಳಿಹಾಕಿದೆ. ಜಸ್ಟಿಸ್‍ ಯು.ಯು.ಲಲಿತ್, ಜಸ್ಟಿಸ್ ರವೀಂದ್ರ ಭಟ್, ಜಸ್ಟಿಸ್ ಬೆಲ ತ್ರಿವೇದಿಯವರ ಪೀಠ ಎನ್‍ಐಎ ಬೇಡಿಕೆ ತಿರಸ್ಕರಿಸಿತು.

ಹೈಕೋರ್ಟು ನೀಡಿದ ಜಾಮೀನು ರದ್ದುಪಡಿಸಬೇಕೆಂದು NIA ಆಗ್ರಹಿಸಿತ್ತು. ಭೀಮ ಕೊರೇಗಾಂವ್ ಪ್ರಕರಣದಲ್ಲಿ ಆರೋಪ ಹೊರಿಸಿದ ಮೇಲೆ ಎರಡು ವರ್ಷಗಳಿಂದ ಸುಧಾ ಭಾರದ್ವಾಜ್ ಜೈಲಿನಲ್ಲಿದ್ದರು. ಅವರು ಮಾನವಹಕ್ಕು ಹೋರಾಟಗಾರ್ತಿ ಮತ್ತು ಹೆಸರಾಂತ ನ್ಯಾಯವಾದಿಯಾಗಿದ್ದಾರೆ. ಉಳಿದಂತೆ ಎಂಟು ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟು ತಿರಸ್ಕರಿಸಿತ್ತು.

ಸುಧಾ ಭಾರದ್ವಾಜ್ ಸಹಿತ ಐವರು ಮಾನವ ಹಕ್ಕು ಹೋರಾಟಗಾರರನ್ನು ಭೀಮ ಕೊರೇಗಾಂವ್ ಪ್ರಕರಣದಲ್ಲಿ ಪುಣೆ ಪೊಲೀಸರು ಬಂಧಿಸಿದ್ದರು. ತೆಲುಗು ಕವಿ ಮಾನವಹ್ಕು ಕಾರ್ಯಕರ್ತ ವರವರರಾವ್, ವಕೀಲರಾದ ಸುಧಾಭಾರದ್ವಾಜ್ ವೆನಾನ್ ಗೋನ್ವ ಸಲ್ವಿಸ್, ಅರುಣ್ ಫೆರೆರ, ಪತ್ರಕರ್ತ ಗೌತಂಮ್ ನಖ್ಲ ಬಂಧಿತರು. ಇವರಿಗೆ ಮಾವೋವಾದಿಗಳೊಂದಿಗೆ ಸಂಬಂಧವಿದೆ ಎಂದು ಆರೋಪ ಹೊರಿಸಲಾಗಿದೆ.