ಕಾಶ್ಮೀರ 370ನೇ ವಿಧಿ ರದ್ದು : ಸುಪ್ರೀಂಕೋರ್ಟಿನಲ್ಲಿ ಅರ್ಜಿಯ ವಿಚಾರಣೆ

0
478

ಹೊಸದಿಲ್ಲಿ, ಆ. 13: ಜಮ್ಮುಕಾಶ್ಮೀರದ 370ನೇ ವಿಧಿಯನ್ನು ರದ್ದು ಪಡಿಸಿದ ಬಳಿಕ ಹೇರಲಾದ ನಿಯಂತ್ರಣವನ್ನು ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟು ಇಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. ಕಾಂಗ್ರೆಸ್ ಹೋರಾಟಗರ ತೆಹ್ಸೀನ್ ಪೂನಾವಾಲ ಅರ್ಜಿ ಸಲ್ಲಿಸಿದ್ದು ಅರುಣ್ ಮಿಶ್ರ, ಎಂ ಆರ್ ಶಾ, ಅಜಯ್ ರಸ್ತೋಗಿಯವರ ಸುಪ್ರೀಂಕೋರ್ಟು ಪೀಠ ಅರ್ಜಿಯ ಮೇಲೆ ವಿಚಾರಣೆ ನಡೆಸಲಿದೆ. ಅನವಶ್ಯಕವಾಗಿ ಜಮ್ಮುಕಾಶ್ಮೀರದಲ್ಲಿ ಕರ್ಫ್ಯೂ ಮತ್ತು ಇತರ ನಿಯಂತ್ರಣ ಹೆದರಿದ್ದರ ವಿರುದ್ಧ ಅರ್ಜಿ ಸಲ್ಲಿಕೆಯಾಗಿದೆ. ಫೋನ್, ಇಂಟರ್‍ನೆಟ್ ರದ್ದು ಮಾಡಿರುವುದನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಜೆಗಳ ಮೂಲಭೂತ ಆವಶ್ಯಕತೆಗಳನ್ನು ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ಕಾಶ್ಮೀರದಲ್ಲಿದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.

ಕಾಶ್ಮೀರದ ಪತ್ರಕರ್ತರಿಗೆ ನಿಷೇಧ ಹೇರಲಾಗಿದ್ದನ್ನು ಪ್ರಶ್ನಿಸಿ ಕಾಶ್ಮೀರ ಟೈಮ್ಸ್ ಎಕ್ಸಿಕ್ಯೂಟಿವ್ ಎಡಿಟರ್ ಅನುರಾಧ ಬಾಸಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ತುರ್ತು ಪರಿಗಣನೆ ನೀಡಬೇಕೆಂದು ಅವರು ಕೋರ್ಟನ್ನು ಆಗ್ರಹಿಸಿದ್ದಾರೆ. ಇದಲ್ಲದೆ ಎನ್‍ಸಿಪಿ ಕೂಡ ಇದೇ ರೀತಿಯ ಅರ್ಜಿ ಸಲ್ಲಿಸಿದ್ದು ಕೋರ್ಟಿನ ಪರಿಗಣನೆಯಲ್ಲಿದೆ.