ಪ್ರಚೋದಕ ಹೇಳಿಕೆ: ಕಪಿಲ್ ಮಿಶ್ರ ವಿರುದ್ಧ ಅರ್ಜಿ ವಿಚಾರಣೆ ಮುಂದೂಡಿಕೆ

0
390

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 2: ಪ್ರಚೋದಕ ಭಾಷಣ ಮಾಡಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರ ವಿರುದ್ಧದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋಟು ಬುಧವಾರಕ್ಕೆ ಮುಂದೂಡಿದೆ. ಕಪಿಲ್ ಮಿಶ್ರ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಗಲಭೆಪೀಡಿತರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟು ವಿಚಾರಣೆಗೆತ್ತಿಕೊಂಡಿದೆ. ಕೋರ್ಟುಗಳು ಶಾಂತಿ ನೆಲೆಸಿರುವಂತಾಗಲು ಯತ್ನಿಸುತ್ತಿದೆ. ಆದರೆ ಗಲಭೆ ತಡೆಯುವುದಕ್ಕಲ್ಲ. ನಿಯಂತ್ರಿಸಲು ಮಾತ್ರ ಕೋರ್ಟಿಗೆ ಸಾಧ್ಯ ಎಂದು ಚೀಫ್ ಜಸ್ಟಿಸ್ ಎಸ್.ಐ ಬೊಬ್ಡೆ ಹೇಳಿದರು. ಕಪಿಲ್ ಮಿಶ್ರ ವಿರುದ್ಧ ಅರ್ಜಿಯನ್ನು ದಿಲ್ಲಿ ಹೈಕೋರ್ಟು ಪರಿಗಣಿಸುತ್ತಿದೆ. ಆದರೆ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಮಾರ್ಚ್ ನಾಲ್ಕಕ್ಕೆ ವಾದ ಆಲಿಸಲಾಗುವುದು ಎಂದು ಚೀಫ್ ಜಸ್ಟಿಸ್ ಹೇಳಿದರು.

ಕಪಿಲ್ ಮಿಶ್ರರ ವಿರುದ್ಧ ಎಫ್‍ಐಆರ್ ದಾಖಲಿಸಲು ದಿಲ್ಲಿ ಹೈಕೋರ್ಟು ಈ ಹಿಂದೆ ಆದೇಶ ಹೊರಡಿಸಿತ್ತು. ದ್ವೇಷದ ಹೇಳಿಕೆ ನೀಡಿದ ಕಪಿಲ್ ಮಿಶ್ರ, ಅನುರಾಗ್ ಠಾಕೂರ್, ಪರ್‍ವೇಶ್ ಶರ್ಮರ ವಿರುದ್ಧ ಎಫ್‍ಐಆರ್ ದಾಖಲಿಸಲು ಮತ್ತು ನಾಲ್ಕು ವಾದೊಳಗೆ ವರದಿ ನೀಡಬೇಕೆಂದು ದಿಲ್ಲಿ ಹೈಕೋರ್ಟು ಈ ಹಿಂದೆ ಸೂಚಿಸಿತ್ತು.