ಆರ್ಟಿಕಲ್ 370 ರದ್ದು: ವಿಶಾಲ ಪೀಠಕ್ಕಿಲ್ಲ

0
717

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 2: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ವಿಶಾಲ ಪೀಠಕ್ಕೆ ನೀಡಬೇಕೆಂಬ ಆಗ್ರಹವನ್ನು ಸುಪ್ರೀಂಕೋರ್ಟು ತಳ್ಳಿಹಾಕಿದೆ. ಪ್ರಕರಣದಲ್ಲಿ ವಾದ ಆಲಿಸಿದ ಐವರ ಸದಸ್ಯರ ಸುಪ್ರೀಂಕೋರ್ಟಿನ ಪೀಠವೇ ವಿಚಾರಣೆಯನ್ನು ನಡೆಸಲಿದೆ ಎಂದು ತಿಳಿಸಿತು. ಜಸ್ಟಿಸ್ ಎನ್‍ ವಿ ರಮಣ ಅಧ್ಯಕ್ಷತೆಯಲ್ಲಿ ಜಸ್ಟಿಸ್ ಎಸ್‍ ಕೆ ಕೌಲ್, ಆರ್. ಸುಭಾಶ್ ರೆಡ್ಡಿ, ಬಿ ಆರ್ ಗವಾಯ್, ಸೂರ್ಯಕಾಂತರಿರುವ ಸುಪ್ರೀಂಕೋರ್ಟು ಪೀಠ ವಾದವನ್ನು ಆಲಿಸಿತು.

ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರತಿಪಕ್ಷ ವಿರೋಧವನ್ನು ಲೆಕ್ಕಿಸದೆ ಜಮ್ಮುಕಾಶ್ಮೀರದ ವಿಷೇಶ ಸ್ಥಾನಮಾನವನ್ನು ಕೇಂದ್ರ ಸರಕಾರ ತೆರವುಗೊಳಿಸಿತ್ತು. ಜಮ್ಮು ಕಾಶ್ಮೀರ, ಲಡಾಕ್‍ಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿತ್ತು. ಆರ್ಟಿಕಲ್ 370 ರದ್ದು ಮಾಡಿದ್ದರ ವಿರುದ್ಧ ಅರ್ಜಿಗಳು ಸುಪ್ರೀಂ ಕೋರ್ಟಿನ ವಿಚಾರಣೆಯಲ್ಲಿವೆ.