ಕೇರಳದಲ್ಲಿ ಶಾಲೆ ಪ್ರವೇಶ ವರ್ಚುವಲ್ : ಆರಂಭದಲ್ಲಿ ರಿವಿಝನ್ ತರಗತಿಗಳು; ಶಿಕ್ಷಣ ಸಚಿವ

0
327

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಶಾಲೆ ಪ್ರವೇಶಾತಿಯನ್ನು ಆನ್‍ಲೈನ್ ಮೂಲಕ ನಡೆಸಲಾಗುವುದು ಎಂದು ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದರು. ಜೂನ್ ಒಂದಕ್ಕೆ ರಾಜ್ಯದಲ್ಲಿ ಶಾಲಾ ಪ್ರವೇಶೋತ್ಸವ ಉದ್ಘಾಟನೆಯು ತಿರುವನಂತಪುರಂ ಕಾಟನ್ ಹಿಲ್ ಸ್ಕೂಲ್‍ನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ಶಿಕ್ಷಣ ಸಚಿವ ಶಿವನ್ ಕುಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಎರಡು ಹಂತದಲ್ಲಿ ಪ್ರವೇಶೋತ್ಸವ ಇರಲಿದೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ ಒಂಬತ್ತು ಗಂಟೆಗೆ ವಿಕ್ಟರ್ಸ್ ಚ್ಯಾನೆಲ್ ಮೂಲಕ ಪ್ರವೇಶೋತ್ಸವ ಉದ್ಘಾಟನೆ ನಡೆಯಲಿದ್ದು, ಹನ್ನೊಂದು ಗಂಟೆಗೆ ವರ್ಚುವಲ್ ಆಗಿ ಶಾಲೆಗಳ ಪ್ರವೇಶೋತ್ಸವ ನಡೆಯಲಿದೆ. ಆರಂಭದಲ್ಲಿ ಡಿಜಿಟಲ್ ತರಗತಿಯಿದೆ. ನಂತರ ಸಂವಾದ ರೀತಿಯಲ್ಲಿ ತರಗತಿ ನಡೆಸುವ ಚಿಂತನೆ ನಡೆಯುತ್ತಿದೆ. ಆರಂಭದಲ್ಲಿ ಡಿಜಿಟಲ್ ಆಗಿ ರಿವಿಝನ್ ಕ್ಲಾಸುಗಳು ಇರಲಿವೆ. ಎಸೆಸೆಲ್ಸಿ ಮೌಲ್ಯ ನಿರ್ಣಯ ಜೂನ್ ಏಳರಿಂದ 25ನೇ ತಾರೀಕಿನವರೆಗೆ ನಡೆಯಲಿದೆ. ಹೈಯರ್ ಸೆಕಂಡರಿ-ವಿಎಚ್‍ಎಸ್‍ಇ ಮೌಲ್ಯ ನಿರ್ಣಯ ಜೂನ್ ಒಂದರಿಂದ 19ರವರೆಗೆ ನಡೆಯಲಿದೆ. ಪ್ರ್ಯಾಕ್ಟಿಕಲ್ ಪರೀಕ್ಷೆ ಜೂನ್ 21ರಿಂದ ಜುಲೈ ಏಳರವರೆಗೆ ನಡೆಯಲಿದೆ. ಪ್ಲಸ್ ವನ್ ಪರೀಕ್ಷೆಯ ಕುರಿತು ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವರು ಹೇಳಿದರು.