ನೋಂದಾಯಿತ ಕಾರ್ಮಿಕರಿಗೆ ಉಚಿತ್ ಬಸ್ ಪ್ರಯಾಣ: ಕೇಜ್ರಿವಾಲ್ ಸರಕಾರದಿಂದ ಪಾಸ್ ವಿತರಣೆ

0
351

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನೋಂದಾವಣೆಗೊಂಡ ನಿರ್ಮಾಣ ಕಾರ್ಮಿಕರಿಗೆ ಸರಕಾರಿ ಬಸ್‍ಗಳಲ್ಲಿ ಉಚಿತ್ರ ಪ್ರಯಾಣ ಸೌಲಭ್ಯದ ಬಸ್ ಪಾಸ್ ಅನ್ನು ದಿಲ್ಲಿಯ ಕೇಜ್ರಿವಾಲ್ ಸರಕಾರ ಹೊರತಂದಿದೆ. ಕಾರ್ಮಿಕ ಇಲಾಖೆ ಹೊಣೆಯಿರುವ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯ ನೂರು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸಿ ಯೋಜನೆಯನ್ನು ಉದ್ಘಾಟಿಸಿದರು.

ರಾಷ್ಟ್ರೀಯ ರಾಜಧಾನಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆಯಲಿದ್ದಾರೆ. ಕಳೆದ ವರ್ಷ ವಿವಿಧ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿತ್ತು. 600 ಕೋಟಿ ರೂಪಾಯಿ ವೆಚ್ಚದಲ್ಲಿ ಹತ್ತು ಲಕ್ಷ ಕಾರ್ಮಿಕರಿಗೆ ಉಚಿತ ಪಾಸ್ ವಿತರಿಸಿದ್ದೇವೆ ಎಂದು ಫಲಾನುಭವಿಗಳ ಸಭೆಯಲ್ಲಿ ಸಿಸೊಡಿಯ ಹೇಳಿದರು.

ಕಟ್ಟಡ ನಿರ್ಮಾಣ ಕಾರ್ಮಿಕರು ಇನ್ನು ಬಸ್ ಪಾಸ್‍ಗೆ ಕ್ಯೂ ನಿಲ್ಲಬೇಕಾಗಿಲ್ಲ. ಅವರಿಗೆ ಡೆಲ್ಲಿ ಸಾರಿಗೆ ವೆಬ್‍ಸೈಟ್, ಕನ್ಸ್ಟ್ರಕ್ಷನ್ ಬೋರ್ಡಿನ 34 ನೋಂದಾಯಿತ ಕೇಂದ್ರಗಳಿಂದ ಆನ್ಲೈನ್ ಆಗಿ ನೋಂದಾವಣೆ ಮಾಡಿಕೊಳ್ಳಬಹುದು. ದಿಲ್ಲಿ ಬಿಲ್ಡಿಂಗ್ ಆಂಡ್ ಅದರ್ ಕನ್ಸ್ಟ್ರಕ್ಷನ್ ವರ್ಕರ್ಸ್ ವೆಲ್ಫೇರ್ ಬೋರ್ಡ್‌ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ಕಾರ್ಮಿಕರಿಗೂ ದಿಲ್ಲಿ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್‍ನ ಕ್ಲಸ್ಟರ್ ಬಸ್‍ಗಳಲ್ಲಿ ಪಾಸ್‌ನೊಂದಿಗೆ ಉಚಿತವಾಗಿ ಪ್ರಯಾಣಿಸಬಹುದು. ಪಾಸ್‍ಗಾಗಿ ಅರ್ಜಿ ಸಲ್ಲಿಸುವಂತೆ ದಿಲ್ಲಿ ಸರಕಾರ ಹೇಳಿಕೆ ನೀಡಿದೆ.